ಶಾರದಾ ಶಿಕ್ಷಣ ಸಂಸ್ಥೆಯ 10 ವರ್ಷಗಳ ಸೇವೆ ಶ್ಲಾಘನೀಯ: ಶೌಕತ್ತಲಿ ಲಂಬೂನವರ
ನವಲಗುಂದ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ 10 ವರ್ಷಗಳ ಸಾಧನೆ ಗೈದ ನಾಗನೂರು ಗ್ರಾಮದ ಶಾರದಾ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಗತಿಪರ ರೈತ ಶೌಕತ್ತಲಿ ಲಂಬೂನವರ ಅಭಿಪ್ರಾಯಪಟ್ಟರು. ತಾಲೂಕಿನ ನಾಗನೂರು ಗ್ರಾಮದ ಶಾರದಾ ಆಂಗ್ಲ ಮಾಧ್ಯಮ ಶಾಲೆಯ 10ನೇ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ದೂರದ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೋಗುವಂತಹ ಸಂದರ್ಭಗಳು ಇರುತ್ತಿದ್ದವು. ಈ…

