ಕಳಸ ಗ್ರಾಮದ ಅಂಬಿಗರ ಚೌಡಯ್ಯ ಭವನ ಪೂರ್ಣಕ್ಕೆ ಷಣ್ಮುಖಪ್ಪ ಶಿವಳ್ಳಿಗೆ ಮನವಿ: 50 ಮೂಟೆ ಸಿಮೆಂಟ್‌ ನೆರವು ಭರವಸೆ

​ಕುಂದಗೋಳ: ಕುಂದಗೋಳ ವಿಧಾನಸಭಾ ಕ್ಷೇತ್ರದ ಕಳಸ ಗ್ರಾಮದಲ್ಲಿ ಅಪೂರ್ಣಗೊಂಡಿರುವ ಶ್ರೀ ಅಂಬಿಗರ ಚೌಡಯ್ಯ ಸಮುದಾಯ ಭವನ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಶ್ರೀ ಅಂಬಿಗರ ಚೌಡಯ್ಯ ಯುವಕ ಮಂಡಳಿ ಮಿತ್ರರು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಷಣ್ಮುಖಪ್ಪ ಎಸ್. ಶಿವಳ್ಳಿ ಅವರಿಗೆ ಮನವಿ ಸಲ್ಲಿಸಿದರು. ​ಕಳಸ ಗ್ರಾಮದಲ್ಲಿ ಷಣ್ಮುಖಪ್ಪ ಶಿವಳ್ಳಿ ಅವರನ್ನು ಭೇಟಿ ಮಾಡಿದ ಯುವಕ ಮಂಡಳಿಯ ಸದಸ್ಯರು, ಸಮುದಾಯ ಭವನದ ಕಾಮಗಾರಿಯು ಹಲವು ಕಾರಣಗಳಿಂದ ಅಪೂರ್ಣಗೊಂಡಿದ್ದು, ಇದರಿಂದ ಸಮುದಾಯದ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು….

Read More

ಪ್ರತಿಯೊಬ್ಬರ ಜೀವನದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಅಗತ್ಯ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ:ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಎನ್ನುವುದು ಸರಕಾರಿ ನೌಕರರಾಗಿರಲಿ ಅಥವಾ ಸಾರ್ವಜನಿಕರಾಗಿರಲಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅಳವಡಿಸಿಕೊಂಡಿರಬೇಕು. ಅಂದಾಗ ಮಾತ್ರ ಸ್ವಸ್ಥ ಮತ್ತು ನೆಮ್ಮದಿಯ ಜೀವನವನ್ನು ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಸೋಮವಾರದಂದು (ಅ. 27) ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ಇಲಾಖೆಗಳು ಸಂಯುಕ್ತವಾಗಿ ಆಯೋಜಿಸಿದ್ದ ‘ಜಾಗೃತಿ: ನಮ್ಮ ಒಟ್ಟು ಜವಾಬ್ದಾರಿ’…

Read More

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ ಲಾಡ್

ಧಾರವಾಡ: ಸುಮಾರು ವರ್ಷಗಳ ನಂತರ ಪ್ರಥಮ ಬಾರಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು ಸರ್ಕಾರ ಅವಕಾಶ ನೀಡಿದ್ದು, ಈ ಅಭಿವೃದ್ಧಿ ಯೋಜನಾ ವರದಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿ ಆಗಿರಬೇಕು ಎಂದು ಕಾರ್ಮಿಕ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಅಭಿಪ್ರಾಯಪಟ್ಟರು. ಅವರು ಸೋಮವಾರದಂದು (ಅ. 27) ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಅಭಿವೃದ್ಧಿ ಸಮಿತಿಯ ಪ್ರಥಮ ಸಭೆಯನ್ನು ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧಾರವಾಡ…

Read More

ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಡಿಜಿ ಮತ್ತು ಐಜಿಪಿ ಅವರಿಂದ ಪ್ರಗತಿ ಪರಿಶೀಲನಾ ಸಭೆ: ಜನಸ್ನೇಹಿ ಸೇವೆಗೆ ಒತ್ತು

ಧಾರವಾಡ:ರಾಜ್ಯದ ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಅವರು ಭಾನುವಾರ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ​ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೊಲೀಸ್ ಸೇವೆಯು ಜನಸ್ನೇಹಿಯಾಗಿರಬೇಕು. ಸಾರ್ವಜನಿಕರ ರಕ್ಷಣೆ ನಮ್ಮ ಪ್ರಥಮ ಆದ್ಯತೆಯಾಗಿರಬೇಕು. ಅಲ್ಲದೆ, ಇಲಾಖೆ ಜಾರಿಗೆ ತಂದಿರುವ ‘ಮನೆ ಮನೆಗೆ ಪೊಲೀಸ್’ ಉಪಕ್ರಮವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದು, ಅಭಾದಿತ ಮತ್ತು ನೊಂದ ವ್ಯಕ್ತಿಗಳ ಪರವಾಗಿ ಪೊಲೀಸರು ಇನ್ನೂ ಉತ್ತಮ ಕರ್ತವ್ಯ…

Read More

ಕಾರ್ಮಿಕ ಇಲಾಖಾ ಕಿಟ್: ಅರ್ಜಿ ಸಲ್ಲಿಸಲು ನ.15 ಕೊನೆ ದಿನ; ಮಧ್ಯವರ್ತಿಗಳ ಅವಕಾಶವಿಲ್ಲ; ಫಲಾನುಭವಿಗಳು ನೇರವಾಗಿ ಉಪಯೋಗ ಪಡೆಯಲಿ

ಧಾರವಾಡ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೇ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಗೌಂಡಿ ಸೇಪ್ಟಿ ಕಿಟ್ ವಿತರಣೆಗಾಗಿ ಕುಂದಗೋಳ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳೆ ನೇರವಾಗಿ ಅರ್ಹರು ಅರ್ಜಿ ಸಲ್ಲಿಸಬೇಕು. ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ಕುಂದಗೋಳ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕಿ ರಜನಿ ಹಿರೇಮಠ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೇ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಗೌಂಡಿ ಸೇಪ್ಟಿ ಕಿಟ್ ವಿತರಣೆಗಾಗಿ ಎಲೆಕ್ಟ್ರೀಷಿಯನ್ಸ್…

Read More

ಉಪ್ಪಿನಬೆಟಗೇರಿ ಉದ್ದು ಖರೀದಿ ಕೇಂದ್ರಕ್ಕೆ ತಹಶೀಲ್ದಾರ ಡಾ. ಡಿ ಎಚ್ ಹೂಗಾರ ಭೇಟಿ: ನೋಂದಣಿಗೆ ಅನಧಿಕೃತ ಹಣ ಪಡೆಯದಂತೆ ಎಚ್ಚರಿಕೆ

ಧಾರವಾಡ : ಬೆಂಬಲ ಬೆಲೆ ಯೋಜನೆಯಡಿ ಕಾಳು ಖರೀದಿಗೆ ನೋಂದಣಿ ಮಾಡಿಕೊಳ್ಳುವ ಕೇಂದ್ರಗಳಲ್ಲಿ ರೈತರಿಂದ ಅನಧಿಕೃತವಾಗಿ ಹಣ ವಸೂಲು ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಉಚಿತವಾಗಿರುವ ನೋಂದಣಿಗೆ ಹಣ ಪಡೆದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಧಾರವಾಡ ತಹಶೀಲ್ದಾರ ಡಾ. ಡಿ.ಎಚ್. ಹೂಗಾರ ಅವರು ಇಂದು (ಅ.27) ಬೆಳಿಗ್ಗೆ ಉಪ್ಪಿನಬೆಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ…

Read More

ಸಂಶಿ: ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ಸಲ್ಲಿಕೆ ನಿಜವಾದ ಪುಣ್ಯ: ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ

ಕುಂದಗೋಳ: ಇಂದಿನ ದಿನಗಳಲ್ಲಿ ನಿಸ್ವಾರ್ಥಭಾವದಿಂದ ಸೇವೆ ಸಲ್ಲಿಸಿ ಸತ್ಕಾರದಲ್ಲಿ ತೊಡಗಿರುವ ವಿದ್ಯಾರ್ಥಿ ಬಳಗ ಅಪರೂಪ. ಅಂತಹ ವಿದ್ಯಾರ್ಥಿಗಳು ತಂದೆ ತಾಯಿ, ಗುರು-ಹಿರಿಯರನ್ನು ಗೌರವಿಸಿ, ಅವರ ಸೇವಾ ಮನೋಭಾವವನ್ನು ಕಂಡು ಗೌರವಿಸಿ ಸತ್ಕರಿಸುತ್ತಿರುವುದು ನಿಜಕ್ಕೂ ಪುಣ್ಯದ ಕಾರ್ಯ ಎಂದು ಸಂಸ್ಥಾನಮಠ ಶಿರಹಟ್ಟಿಯ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು. ಅವರು ಭಾನುವಾರದಂದು ಸಂಶಿ ಗ್ರಾಮದ ಶ್ರೀ ಜ.ಫಕೀರ ಶೀವಜೋಗೀಶ್ವರ ಪ್ರೌಢಶಾಲೆಯಲ್ಲಿ ನಡೆದ 2002-03ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಸಮಾರಂಭದಲ್ಲಿ ಆಶೀರ್ವಚನ ನೀಡಿ…

Read More

ಜತ್ತ ಗ್ರಾಮ ತಲುಪಿದ ದಿಂಡಿ ಪಾದಯಾತ್ರೆ: ಭಕ್ತಿ, ಉತ್ಸಾಹದ ವಾತಾವರಣ

​ನವಲಗುಂದ: ತಾಲೂಕಿನ ಅಳಗವಾಡಿ ಶ್ರೀ ಹರಿ ಮಂದಿರದಿಂದ ಪ್ರಾರಂಭಗೊಂಡ ದಿಂಡಿ ಪಾದಯಾತ್ರೆಯು ನರಗುಂದ, ರಾಮದುರ್ಗ, ಮುಧೋಳ, ಜಮಖಂಡಿ, ಉಮರಾಣಿ ಸೇರಿದಂತೆ ಅನೇಕ ಹಳ್ಳಿಗಳ ಮಾರ್ಗವಾಗಿ ಪಯಣಿಸಿ ಶುಕ್ರವಾರ ಮಹಾರಾಷ್ಟ್ರದ ಜತ್ತ ಗ್ರಾಮವನ್ನು ತಲುಪಿತು. ಯಾತ್ರಿಕರ ಆಗಮನದ ಹಿನ್ನೆಲೆ ಜತ್ತ ನಗರದಲ್ಲಿ ಭಕ್ತಿ ಮತ್ತು ಉತ್ಸಾಹದ ವಾತಾವರಣ ನಿರ್ಮಾಣವಾಗಿತ್ತು. ಬೀದಿಗಳಲ್ಲಿ ಪುಷ್ಪಾಲಂಕಾರ ಮಾಡಲಾಗಿದ್ದು, ಭಜನೆ, ಕೀರ್ತನೆಗಳ ಮಧ್ಯೆ ಸಂತ ಮಹಾತ್ಮರಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು. ಭಕ್ತರು ದಿಂಡಿಯ ಯಾತ್ರಿಕರಿಗೆ ನೀರು, ಪ್ರಸಾದ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿ…

Read More

ಕಲಘಟಗಿಯಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಸಂಚಲನ ವಿಜೃಂಭಣೆಯಿಂದ: 1048 ಸ್ವಯಂಸೇವಕರ ಪಥಸಂಚಲನ, 5000 ಕ್ಕಿಂತ ಹೆಚ್ಚು ಜನರ ಹಾಜರಾತಿ

ಕಲಘಟಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಲಘಟಗಿ ತಾಲೂಕು ಘಟಕದ ವತಿಯಿಂದ ವಿಜಯದಶಮಿ ಉತ್ಸವವನ್ನು ಭಾನುವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ಪೂರ್ಣ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನವು ಜೆ.ಇ. ಕಾಲೇಜು ಮೈದಾನದಿಂದ ಆರಂಭವಾಗಿ, ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಗರದ ಜನರು ಪಥಸಂಚಲನಕ್ಕೆ ಉತ್ಸಾಹಭರಿತ ಸ್ವಾಗತ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಂಧೀಶ ಪಾಟೀಲ್ ಉಪಸ್ಥಿತರಿದ್ದರು. ವಕ್ತಾರರಾಗಿ ಕರ್ನಾಟಕದ ಉತ್ತರ ಪ್ರಾಂತ ಸೇವಾ ಪ್ರಮುಖರಾದ ಶ್ರೀ ನರಸಿಂಹ ಕುಲಕರ್ಣಿ ಅವರು ಮಾತನಾಡಿ, ಸಂಘದ ಸೇವಾ ಚಟುವಟಿಕೆಗಳು ಹಾಗೂ ಸಾಮಾಜಿಕ…

Read More

​ಕುಂದಗೋಳದಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಸಂಚಲನ: ‘ಅನ್ಯಾಯ ಮಾಡದೆ ಬದುಕುವುದು ಧರ್ಮ’ – ಶ್ರೀ ರಘುನಂದ ಜೀ

ಕುಂದಗೋಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕುಂದಗೋಳ ತಾಲೂಕು ಘಟಕದ ವತಿಯಿಂದ ವಿಜಯದಶಮಿ ಮತ್ತು ಸಂಚಲನ ಕಾರ್ಯಕ್ರಮವನ್ನು ಭಾನುವಾರದಂದು ವಿಜೃಂಭಣೆಯಿಂದ ನಡೆಸಲಾಯಿತು. ಪಥಸಂಚಲನಕ್ಕೆ ಶಾಸಕರಿಂದ ಚಾಲನೆಪೂರ್ಣ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನವು ಹರಭಟ್ಟ ಕಾಲೇಜು ಮೈದಾನದಿಂದ ಪ್ರಾರಂಭವಾಯಿತು. ಶಾಸಕರಾದ ಎಂ.ಆರ್. ಪಾಟೀಲ ಅವರು ಭಾರತ ಮಾತೆ, ಡಾ. ಕೇಶವ ಬಲಿರಾಮ ಹೆಡಗೇವಾರ್ ಮತ್ತು ಮಾಧವ ಸದಾಶಿವರಾವ್ ಗೋಳವಾಲ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಥಸಂಚಲನವು ಪಟ್ಟಣದ…

Read More