ಕುಂದಗೋಳ: ಹಳೆಯ ದ್ವೇಷಕ್ಕೆ ನಿಂಗರಾಜ ಎಂಬ ಅಪ್ರಾಪ್ತನ ಬರ್ಬರ ಹತ್ಯೆ; ಮೂವರು ಅಪ್ರಾಪ್ತ ಬಾಲಕರಿಂದ ಕೃತ್ಯ
ಕುಂದಗೋಳ: ಪಟ್ಟಣದ ಸರ್ವೋದಯ ಶಾಲೆಯ ಹಿಂಭಾಗದಲ್ಲಿರುವ ಸೊಸೈಟಿಯ ಖುಲ್ಲಾ ಜಾಗದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಬಾಲಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿ, ಮತ್ತೊಬ್ಬನಿಗೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ನಿಂಗರಾಜ ಎಂಬ ಯುವಕನೇ ಕೊಲೆಯಾದ ದುರ್ದೈವಿಯಾಗಿದ್ದು, ಸಂಜು ತಂದೆ ಮಹಾಂತೇಶ ಶಿರಸಂಗಿ ಎಂಬುವವರು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ಮೂವರು ಅಪ್ರಾಪ್ತ ಬಾಲಕರ ವಿರುದ್ಧ ದೂರು ದಾಖಲಾಗಿದೆ. ದಿನಾಂಕ 14-01-2025 ರಂದು ಮಧ್ಯಾಹ್ನ 3:45 ರಿಂದ 4:00 ಗಂಟೆಯ ಸುಮಾರಿಗೆ…

