ಅಣ್ಣಿಗೇರಿಯಲ್ಲಿ ತಕ್ಷಣವೇ ಕಡಲೆ ಖರೀದಿ ಕೇಂದ್ರ ಆರಂಭಿಸಿ: ಭಾರತೀಯ ಕಿಸಾನ್ ಸಂಘದ ಆಗ್ರಹ
ಅಣ್ಣಿಗೇರಿ: “ರೈತರು ಬೆಳೆದ ಬೆಳೆಗೆ ಸರ್ಕಾರ ಸೂಕ್ತ ಮಾನ್ಯತೆ ನೀಡಬೇಕು ಹಾಗೂ ತಕ್ಷಣವೇ ನಗರದಲ್ಲಿ ಕಡಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ಪ್ರತಿ ಎಕರೆಗೆ ಕನಿಷ್ಠ 8 ಕ್ವಿಂಟಲ್ ಖರೀದಿ ಪ್ರಮಾಣ ನಿಗದಿಪಡಿಸಬೇಕು,” ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಉಪಾಧ್ಯಕ್ಷ ಪಂಚಾಕ್ಷರಿ ಬೆಳೆಬಾಳ ಒತ್ತಾಯಿಸಿದರು. ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ವತಿಯಿಂದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿ ಅವರು ಮಾತನಾಡಿದರು. ಬೆಳೆ ಕಟಾವಿಗೆ ಬರುವ ಮೊದಲೇ ಸರ್ಕಾರ ಕನಿಷ್ಠ ಬೆಂಬಲ…

