ಪೊಲೀಸ್ ಪೇದೆಯಿಂದಲೇ ಮಾಜಿ ಪತ್ನಿ ಕೊಲೆ: ಸವದತ್ತಿಯಲ್ಲಿ ಲೇಡಿ ಕಂಡಕ್ಟರ್ ಹತ್ಯೆ
Recent Views 75 ಬೆಳಗಾವಿ: ವೈವಾಹಿಕ ಜೀವನದಲ್ಲಿನ ಸಂಶಯ ಮತ್ತು ಕಿರುಕುಳದಿಂದ ವಿಚ್ಛೇದನ ಪಡೆದಿದ್ದರೂ, ಆ ದ್ವೇಷ ತಣ್ಣಗಾಗಿರಲಿಲ್ಲ. ಇದೇ ದ್ವೇಷದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯೊಬ್ಬ ತನ್ನ ಮಾಜಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ. ಈ ಕೃತ್ಯದ ಆರೋಪಿ ಸಂತೋಷ್ ಕಾಂಬಳೆ, ನಿಪ್ಪಾಣಿ ಪೊಲೀಸ್ ಠಾಣೆಯ ಪೊಲೀಸ್ ಪೇದೆಯಾಗಿದ್ದು, ಸವದತ್ತಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಸವದತ್ತಿ ಘಟಕದ…

