ಜಮ್ಮು-ಕಾಶ್ಮೀರದಲ್ಲಿ ಭೀಕರ ಮಳೆ, ಪ್ರವಾಹ: ನಾಲ್ವರು ಬಲಿ, ಜನಜೀವನ ಅಸ್ತವ್ಯಸ್ತ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೋಮವಾರ (ಆಗಸ್ಟ್ 26) ಸುರಿದ ಭಾರೀ ಮಳೆ ಮತ್ತು ಭೂಕುಸಿತಕ್ಕೆ ನಾಲ್ವರು ಬಲಿಯಾಗಿದ್ದು, ಹಲವಾರು ಮನೆಗಳು ನೆಲಸಮಗೊಂಡಿವೆ. ಅನಿರೀಕ್ಷಿತ ಪ್ರವಾಹ ಮತ್ತು ಭೂಕುಸಿತದಿಂದಾಗಿ ಇಡೀ ಪ್ರದೇಶವೇ ನಲುಗಿ ಹೋಗಿದೆ. ಅಧಿಕಾರಿಗಳ ಮಾಹಿತಿಯ ಪ್ರಕಾರ, ದಿಢೀರ್ ಪ್ರವಾಹಕ್ಕೆ ಇಬ್ಬರು ಕೊಚ್ಚಿಹೋಗಿ ಮೃತಪಟ್ಟರೆ, ಮನೆ ಕುಸಿದು ಮತ್ತಿಬ್ಬರು ಬಲಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನದಿಯ ಅಪಾಯ ಮಟ್ಟ ಏರಿಕೆ, ರಸ್ತೆ ಸಂಪರ್ಕ ಕಡಿತಭಾರೀ…

