ರಾಜಸ್ಥಾನದ ಜುಂಝುನೂನಲ್ಲಿ ಆಟೋ ಗ್ಯಾರೇಜ್ಗೆ ಕಿಡಿಗೇಡಿಗಳ ಬೆಂಕಿ; 18 ಕಾರುಗಳು ಸುಟ್ಟು ಭಸ್ಮ
ರಾಜಸ್ಥಾನದ: ಜುಂಝುನೂ ಜಿಲ್ಲೆಯಲ್ಲಿರುವ ಮೋಟರ್ಸ್ ವರ್ಕ್ಶಾಪ್ವೊಂದಕ್ಕೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕನಿಷ್ಠ 18 ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಶನಿವಾರ (ನವೆಂಬರ್ 29) ತಡರಾತ್ರಿ ಈ ಘಟನೆ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಜುಂಝುನೂನ ಚುರು ಬೈಪಾಸ್ ರಸ್ತೆಯ ಸಗೀರಾ ವೃತ್ತದ ಸಮೀಪವಿರುವ ‘ಮನ್ನತ್ ಮೋಟರ್ಸ್’ ಎಂಬ ವರ್ಕ್ಶಾಪ್ನಲ್ಲಿ ಈ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಮೂಲಗಳ ಪ್ರಕಾರ, ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು…

