ವಿದ್ಯಾಮಾತೆಗೆ ಇಲ್ಲದ ರಕ್ಷಣೆ: ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕಿಯ ಭೀಕರ ಕೊಲೆ, ಶವ ದಹನ!
ಕಲಬುರಗಿ: ಸಮಾಜಕ್ಕೆ ಜ್ಞಾನದ ಬೆಳಕು ನೀಡುವ ಶಿಕ್ಷಕರಿಗೆ ಇಂದು ರಕ್ಷಣೆಯೇ ಇಲ್ಲದಂತಾಗಿದೆಯೇ? ‘ಗುರು ಸಾಕ್ಷಾತ್ ಪರಬ್ರಹ್ಮ’ ಎಂದು ಪೂಜಿಸುವ ನಾಡಿನಲ್ಲಿ, ಜ್ಞಾನದೀವಿಗೆ ಹಚ್ಚುವ ಗುರುವೊಬ್ಬರು ದುಷ್ಕರ್ಮಿಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿರುವುದು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಕುಡ ಗ್ರಾಮದ ಬಳಿ ಶಿಕ್ಷಕಿಯೊಬ್ಬರನ್ನು ಅತಿ ಕ್ರೂರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವ ಸುಟ್ಟು ಹಾಕಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರ: ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾದ ಜ್ಯೋತಿ…

