ರಾಣೇಬೆನ್ನೂರು ವೈದ್ಯರ ಮೇಲಿನ ಹಲ್ಲೆ ಪ್ರಕರಣ: ದೂರು-ಪ್ರತಿ ದೂರು ದಾಖಲು, ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು
ರಾಣೇಬೆನ್ನೂರು: ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಹಿನ್ನೆಲೆಯಲ್ಲಿ ರಾಣೇಬೆನ್ನೂರು ನಗರದಲ್ಲಿ ವೈದ್ಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನಗರದ ಕೋಟೆ ಓಣಿಯಲ್ಲಿರುವ ಕ್ಲಿನಿಕ್ಗೆ ನುಗ್ಗಿದ 20-30 ಜನರ ಗುಂಪು ವೈದ್ಯರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿದೆ.ನಗರದ ರಾಜೇಶ್ವರಿ ನಗರದ ನಿವಾಸಿ ಡಾ. ಗುರುಮೂರ್ತಯ್ಯ ರಾಚೋಟಿಮಠ ಅವರ ಮೇಲೆ ಈ ದಾಳಿ ನಡೆದಿದೆ. ಘಟನೆ ವೇಳೆ ಡಾ. ಗುರುಮೂರ್ತಯ್ಯ ಅವರ ಕ್ಲಿನಿಕ್ ಎದುರು ನಿಲ್ಲಿಸಿದ್ದ ಬೈಕ್ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ತಕ್ಷಣವೇ…

