ದೇವರಾಜ ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ: ಹಾವೇರಿಯಲ್ಲಿ ಸಿಎಂಗೆ ಬೃಹತ್ ಹೂಮಾಲೆ ಸನ್ಮಾನ, ಡಿಕೆಶಿ ಅವರಿಂದ ಸಿಹಿ ಹಂಚಿಕೆ
ಹಾವೇರಿ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಕಾಲ ಜನಸೇವೆಗೈದ ಧೀಮಂತ ನಾಯಕ ಡಿ. ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾವೇರಿ ಜಿಲ್ಲೆಯ ಜನತೆ ಮತ್ತು ಅಭಿಮಾನಿಗಳು ಅಭೂತಪೂರ್ವ ಸನ್ಮಾನ ಮಾಡಿದರು. ಹಾವೇರಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದ ವೇದಿಕೆಯು ಈ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಯಿತು. ಸಿದ್ದರಾಮಯ್ಯ ಅವರ ಈ ಸಾಧನೆಯನ್ನು ಸಂಭ್ರಮಿಸಿದ ಜಿಲ್ಲೆಯ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಅವರಿಗೆ ಬೃಹತ್ ಹೂಮಾಲೆಯನ್ನು ಹಾಕುವ ಮೂಲಕ ತಮ್ಮ…

