ಅಮಾವಾಸ್ಯೆ ದರ್ಶನ ಮುಗಿಸಿ ಬರುತ್ತಿದ್ದ ಒಂದೇ ಕುಟುಂಬದ ಆರು ಮಂದಿ ಸಜೀವ ದಹನ: ರಾಜ್ಯವನ್ನೇ ನಡುಗಿಸಿದ ಭೀಕರ ದುರಂತ!
ಯಾದಗಿರಿ: ದೈವದರ್ಶನ ಮುಗಿಸಿ ಮರಳುತ್ತಿದ್ದ ಕುಟುಂಬವೊಂದಕ್ಕೆ ವಿಧಿ ಅಕ್ಷರಶಃ ಮೃತ್ಯುರೂಪಿಯಾಗಿ ಅಪ್ಪಳಿಸಿದೆ. ಇಂದು ಬೆಳಿಗ್ಗೆ ಸುಮಾರು 9:45ರ ಸುಮಾರಿಗೆ ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯ ಭೀಕರತೆಗೆ ಒಂದೇ ಕುಟುಂಬದ ಆರು ಮಂದಿ ಕಾರಿನಲ್ಲೇ ಸಜೀವ ದಹನಗೊಂಡಿರುವ ಘೋರ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನಿಂದ ಕಲಬುರಗಿ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಹಾಗೂ ತಿಂಥಣಿ ಮೌನೇಶ್ವರ ವೇಣುಗೋಪಾಲ ಸ್ವಾಮಿಯ ದರ್ಶನ ಮುಗಿಸಿ ಸಿರವಾರಕ್ಕೆ ಹಿಂತಿರುಗುತ್ತಿದ್ದ ಕಾರಿನ ನಡುವೆ…

