ಶಿರಸಿ | ಬೆಣ್ಣೆಹೊಳೆ ಜಲಪಾತದಲ್ಲಿ ದುರ್ಘಟನೆ ಒಬ್ಬ ವಿಧ್ಯಾರ್ಥಿ ನೀರು ಪಾಲು ; ಮತ್ತೊಬ್ಬನ ರಕ್ಷಣೆ*
ಉತ್ತರ ಕನ್ನಡ ಜಿಲ್ಲೆಯ: ಶಿರಸಿ ತಾಲ್ಲೂಕಿನ ಬೆಣ್ಣೆಹೊಳೆ ಜಲಪಾತದ ಬಳಿ ದುರ್ಘಟನೆ ಸಂಭವಿಸಿದೆ. ಪ್ರವಾಸಕ್ಕೆ ಅಂತ ಬಂದಿದ್ದ ವಿದ್ಯಾರ್ಥಿಗಳು ಕಾಲು ಜಾರಿ ಜಲಪಾತದಲ್ಲಿ ಕೊಚ್ಚಿ ಹೋದ ದುರ್ಘಟನೆ ಸಂಭವಿಸಿದೆ. ಇದರಲ್ಲಿ ಒಬ್ಬ ವಿಧ್ಯಾರ್ಥಿ ಕಲ್ಲು ಬಂಡೆಗಳ ನಡುವೆ ಸಿಲುಕಿ ಕೊಂಡಿದ್ದು ಅವನನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಮತ್ತೊಬ್ಬ ವಿಧ್ಯಾರ್ಥಿ ಕೊಚ್ಚಿ ಹೋಗಿದ್ದು ಅಗ್ನಿಶಾಮಕ ದಳ ಹಾಗೂ ಪೋಲಿಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಹೊಸಪೇಟೆ ಮೂಲದ ಶ್ರೀನಿವಾಸ ರಕ್ಷಿಸಲ್ಪಟ್ಟ ವಿದ್ಯಾರ್ಥಿಯಾಗಿದ್ದು, ಹೂವಿನಹಡಗಲಿ ಮೂಲದ ರಾಹುಲ್ ಕಾಣೆಯಾದ ವಿಧ್ಯಾರ್ಥಿಯಾಗಿದ್ದಾನೆ. ಶಿರಸಿಯ…

