ಶಿಗ್ಗಾಂವ: ತಾ: ಹೊಸೂರು ಗ್ರಾಮದಲ್ಲಿ ಅಂಬೇಡ್ಕರ್ ಮೂರ್ತಿಗೆ ಸಗಣಿ ಬಳಿದು ವಿಕೃತಿ: ದಲಿತರ ಮೇಲೆ ಹಲ್ಲೆ ಆರೋಪ, ಗ್ರಾಮದಲ್ಲಿ ಉದ್ವಿಗ್ನತೆ
ಶಿಗ್ಗಾವಿ: ತಾಲೂಕಿನ ಹೊಸೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಕಿಡಿಗೇಡಿಗಳು ರಾತ್ರೋರಾತ್ರಿ ಸಗಣಿ ಬಳಿದು ಅಪಮಾನ ಮಾಡಿರುವ ಘಟನೆ ನಡೆದಿದೆ. ಈ ಕೃತ್ಯದ ಬೆನ್ನಲ್ಲೇ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪವೂ ಕೇಳಿಬಂದಿದೆ. ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ದಲಿತರನ್ನು ಮೇಲ್ವರ್ಗದವರು ಬಹಿಷ್ಕರಿಸಿದ್ದು, ಯಾವುದೇ ದೇವಸ್ಥಾನಗಳ ಒಳಗೆ ಪ್ರವೇಶ ನೀಡದೆ ತಾರತಮ್ಯ ಎಸಗುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಇದರ ನಡುವೆ, ಭಾನುವಾರ ರಾತ್ರಿ…

