ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಭಟನೆ ತೀವ್ರ: ‘ಅಟ್ರಾಸಿಟಿ’ ಕೇಸ್‌ ದಾಖಲು

ಬೆಳಗಾವಿ: ಮಾಜಿ ಸಂಸದ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಅವರು ವಾಲ್ಮೀಕಿ (ನಾಯಕ) ಸಮುದಾಯದ ಬಗ್ಗೆ ಆಡಿರುವ ಅವಾಚ್ಯ ಪದಗಳ ವಿರುದ್ಧ ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ. ಜಿಲ್ಲಾ ಕೇಂದ್ರ ಬೆಳಗಾವಿ ನಗರ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಅವರ ವಿರುದ್ಧ ಪೊಲೀಸರು ಜಾತಿ ನಿಂದನೆ ಪ್ರಕರಣ (ಅಟ್ರಾಸಿಟಿ ಕೇಸ್) ದಾಖಲೆ ಮಾಡಿದ್ದಾರೆ. ರಮೇಶ ಕತ್ತಿ ಅವರ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ ವಾಲ್ಮೀಕಿ ಸಮುದಾಯದ ನಾಯಕರು ಹಾಗೂ ವಿವಿಧ ಸಂಘಟನೆಗಳು…

Read More

“ಆದೇಶದಲ್ಲಿ ‘ಆರ್‌ಎಸ್‌ಎಸ್‌’ ಪದವೇ ಇಲ್ಲ; ಸಿಎಂ ಹೇಳಿಕೆ ಬಾಲಿಶ”: ಸಂಸದ ಜಗದೀಶ ಶೆಟ್ಟರ್‌ ತಿರುಗೇಟು

“ಆದೇಶದಲ್ಲಿ ‘ಆರ್‌ಎಸ್‌ಎಸ್‌’ ಪದವೇ ಇಲ್ಲ; ಸಿಎಂ ಹೇಳಿಕೆ ಬಾಲಿಶ”: ಜಗದೀಶ ಶೆಟ್ಟರ್‌ ತಿರುಗೇಟು ಧಾರವಾಡ/ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕುರಿತು ರಾಜ್ಯ ಸರ್ಕಾರದ ನಡೆಯನ್ನು ಸಂಸದ ಮತ್ತು ಮಾಜಿ ಮುಖ್ಯಮಂತ್ರಿಯ ಜಗದೀಶ ಶೆಟ್ಟರ್‌ ಅವರು ತೀವ್ರವಾಗಿ ಖಂಡಿಸಿದ್ದು, ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ‘ನಿಷೇಧ ಆದೇಶ’ದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ (ಸೋಮವಾರ) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೆಟ್ಟರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದರು. ಆದೇಶದಲ್ಲಿ ‘ಆರ್‌ಎಸ್‌ಎಸ್‌’…

Read More

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಬಣಕ್ಕೆ ಭರ್ಜರಿ ಗೆಲುವು; 7 ಸ್ಥಾನಗಳ ಫಲಿತಾಂಶ ಪ್ರಕಟಮತದಾನದ ವೇಳೆ ಮಾರಾಮಾರಿ; ರಾಯಬಾಗ ಕ್ಷೇತ್ರ ವಿವಾದದ ಕೇಂದ್ರ

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ (ಅ.19) ನಡೆದ ಚುನಾವಣೆಯು ಉದ್ವಿಗ್ನ ಪರಿಸ್ಥಿತಿಯಲ್ಲಿ ಮುಕ್ತಾಯಗೊಂಡಿದ್ದು, ಇಂದು ಸಂಜೆ ಫಲಿತಾಂಶ ಪ್ರಕಟಗೊಂಡಿದೆ. ಚುನಾವಣೆಗೆ ಸ್ಪರ್ಧಿಸಿದ್ದ 7 ಸ್ಥಾನಗಳ ಪೈಕಿ ಬಹುಪಾಲು ಸ್ಥಾನಗಳನ್ನು ಜಾರಕಿಹೊಳಿ ಬಣವು ಗೆದ್ದುಕೊಳ್ಳುವ ಮೂಲಕ ಬ್ಯಾಂಕ್ ಮೇಲೆ ತಮ್ಮ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಮತದಾನ ಕೇಂದ್ರದಲ್ಲಿ ಮಾರಾಮಾರಿ:ಮತದಾನ ಪ್ರಕ್ರಿಯೆಯು ಬಿ.ಕೆ. ಮಾಡೆಲ್ ಪ್ರೌಢಶಾಲೆಯಲ್ಲಿ ಬೆಳಗ್ಗೆ ಆರಂಭವಾಗುತ್ತಿದ್ದಂತೆಯೇ, ಮತಗಟ್ಟೆ ಬಳಿ ಜಾರಕಿಹೊಳಿ ಹಾಗೂ…

Read More

ಬಿರಡಿಯಲ್ಲಿ ಶ್ರೀ ಮುರಸಿದ್ದೇಶ್ವರ ಜಾತ್ರಾ ಮಹೋತ್ಸವ: ಕಬಡ್ಡಿ, ವಾಲಿಬಾಲ್, ಡೊಳ್ಳಿನ ಪದ ಹಾಗೂ ಎತ್ತಿನಗಾಡಿ ಸ್ವರ್ದೆಗೆ ಸಿದ್ಧತೆ

ರಾಯಬಾಗ (ಭಿರಡಿ): ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಿರಡಿ ಗ್ರಾಮದಲ್ಲಿ ಶ್ರೀ ಮುರಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 19 ರಿಂದ 23 ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಂಗೋಲಿ, ರಾಜ್ಯ ಮಟ್ಟದ ಕಬಡ್ಡಿ, ವಾಲಿಬಾಲ್ ಪಂದ್ಯಾವಳಿಗಳು, ಜಿದ್ದಾಜಿದ್ದಿನ ಡೊಳ್ಳಿನ ಪದಗಳು ಹಾಗೂ ಸಾಂಪ್ರದಾಯಿಕ ಜೋಡು ಎತ್ತಿನಗಾಡಿ ಮತ್ತು ಕುದುರೆಗಾಡಿ ಶರ್ಯತ್ತುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ. ಕ್ರೀಡಾ ಸ್ಪರ್ಧೆಗಳ ವಿವರ: ಜಾನಪದ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳು: ಇತರ ಕಾರ್ಯಕ್ರಮಗಳು:ಅಕ್ಟೋಬರ್ 23 ರಂದು ಮಧ್ಯಾಹ್ನ…

Read More

ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಕದನ: ಕತ್ತಿ-ಪಾಟೀಲ ನಡುವಿನ ಹಣಾಹಣಿಗೆ ಬ್ರೇಕ್!

ಹುಕ್ಕೇರಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಹುಕ್ಕೇರಿ ತಾಲ್ಲೂಕಿನ ವಿವಿದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತಕ್ಷೇತ್ರದ ಚುನಾವಣೆ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ. ಈ ಮೂಲಕ, ಈ ಕ್ಷೇತ್ರದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮತ್ತು ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಅವರ ನಡುವೆ ನಡೆಯಬೇಕಿದ್ದ ನೇರ ಹಣಾಹಣಿಗೆ ಹಿನ್ನಡೆಯಾದಂತಾಗಿದೆ. ಹೈಕೋರ್ಟ್ ಆದೇಶದ ಹಿನ್ನೆಲೆ: ಚುನಾವಣೆ ಮುಂದೂಡಿಕೆಬೆಳಗಾವಿ ಡಿಸಿಸಿ ಬ್ಯಾಂಕಿಗೆ ದಿನಾಂಕ ಅಕ್ಟೋಬರ್ 19, 2025…

Read More

ರಾಯಬಾಗದಲ್ಲಿ ನವೆಂಬರ್ 2 ರಂದು ‘ಚುಟುಕು ಕಮ್ಮಟ’: ಸೀಮಿತ ಸಂಖ್ಯೆಯ ಪ್ರಶಿಕ್ಷಣಾರ್ಥಿಗಳಿಗೆ ಅವಕಾಶ

ರಾಯಬಾಗ (ಬೆಳಗಾವಿ ಜಿಲ್ಲೆ): ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಬೆಳಗಾವಿ ಇವರ ಸಹಯೋಗದಲ್ಲಿ, ಚುಟುಕು ಸಾಹಿತ್ಯ ಪರಿಷತ್ ತಾಲೂಕಾ ಘಟಕ, ರಾಯಬಾಗದಿಂದ ನವೆಂಬರ್ 02 ರಂದು ಒಂದು ದಿನದ ಚುಟುಕು ಕಮ್ಮಟವನ್ನು (ಕಾರ್ಯಾಗಾರ) ಏರ್ಪಡಿಸಲಾಗಿದೆ. ಈ ಕಮ್ಮಟವು ರಾಯಬಾಗ ತಾಲೂಕಿನ ಆಸಕ್ತ ನಾಗರಿಕರಿಗಾಗಿ ಮಾತ್ರ ಆಯೋಜಿಸಲಾಗಿದ್ದು, ಶಿಬಿರದಲ್ಲಿ ಪಾಲ್ಗೊಳ್ಳಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಹಾಗೂ ಲಿಂಗಭೇದವಿಲ್ಲದೆ ತಾಲೂಕಿನ ಯಾರಾದರೂ ಭಾಗವಹಿಸಬಹುದು ಎಂದು ಘಟಕದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಚುಟುಕು ಸಾಹಿತ್ಯ…

Read More

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಬ್ರದರ್ಸ್‌ಗೆ ಭಾರೀ ಮುನ್ನಡೆ; ಒಟ್ಟು 16 ಸ್ಥಾನಗಳಲ್ಲಿ 6 ಅವಿರೋಧ ಆಯ್ಕೆ

ಬೆಳಗಾವಿ: ಉತ್ತರ ಕರ್ನಾಟಕದ ಸಹಕಾರಿ ರಂಗದ ಪ್ರಮುಖ ಸಂಸ್ಥೆಯಾದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (DCC) ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ರಾಜಕೀಯ ಒಗ್ಗಟ್ಟು ಭಾರೀ ಮುನ್ನಡೆ ತಂದುಕೊಟ್ಟಿದೆ. ಒಟ್ಟು 16 ನಿರ್ದೇಶಕ ಸ್ಥಾನಗಳ ಪೈಕಿ ಆರು ಸ್ಥಾನಗಳಿಗೆ ಜಾರಕಿಹೊಳಿ ಬಣದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಮಾಜಿ ಅಧ್ಯಕ್ಷ ರಮೇಶ್ ಕತ್ತಿ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ. 16 ಸ್ಥಾನಗಳಿಗೆ ಚುನಾವಣೆ; 6 ಅವಿರೋಧಬೆಳಗಾವಿ ಡಿಸಿಸಿ ಬ್ಯಾಂಕ್‌ನ ಒಟ್ಟು 16 ನಿರ್ದೇಶಕ ಹುದ್ದೆಗಳಿಗೆ ಚುನಾವಣೆ…

Read More

ಮಗಳು ಲವ್ವರ್ ಜತೆ ಪರಾರಿ:ಮಗಳ ಸಂಬಂದ ವೇ ಬೆಡವೆಂದು ಇಡೀ ಊರಿಗೆ ‘ತಿಥಿ ಊಟ’ ಹಾಕಿಸಿದ ತಂದೆ.

ಬೆಳಗಾವಿ: ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿದ ಯುವಕನೊಂದಿಗೆ ಮಗಳು ಮನೆ ಬಿಟ್ಟು ಪರಾರಿಯಾದ ಕಾರಣ ಮನನೊಂದ ತಂದೆಯೊಬ್ಬರು, ಆಕೆ ತಮ್ಮ ಪಾಲಿಗೆ ಸತ್ತುಹೋದಳೆಂದು ಭಾವಿಸಿ, ಆಕೆಯ ತಿಥಿ ಮಾಡಿ ಇಡೀ ಗ್ರಾಮಕ್ಕೆ ಊಟ ಹಾಕಿಸಿದ ವಿಲಕ್ಷಣ ವಿದ್ಯಮಾನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ. ಪ್ರೀತಿ ವಿವಾಹಕ್ಕೆ ಪೋಷಕರ ವಿರೋಧ:ನಾಗರಾಳ ಗ್ರಾಮದ ನಿವಾಸಿ ಶಿವಗೌಡ ಎಂಬವರ ಮಗಳು ಅದೇ ಗ್ರಾಮದ ವಿಠ್ಠಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಪ್ರೀತಿ ಮತ್ತು ವಿವಾಹಕ್ಕೆ ಪೋಷಕರು…

Read More

ಬೆಡ್ ಬಾಕ್ಸ್‌ನಲ್ಲಿ ಪತ್ನಿಯ ಶವ ಇಟ್ಟು ಪರಾರಿ: ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಭಯಾನಕ ಕೃತ್ಯ!

ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ಒಂದು ಭಯಾನಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕಮಲದಿನ್ನಿ ಗ್ರಾಮದಲ್ಲಿ ಪತಿಯೋರ್ವ ತನ್ನ ಪತ್ನಿಯನ್ನು ಕೊಲೆ ಮಾಡಿ, ಆಕೆಯ ಶವವನ್ನು ಮನೆಯ ಮಂಚದ (ಬೆಡ್) ಒಳಗಿನ ಬಾಕ್ಸ್‌ನಲ್ಲಿ ಇರಿಸಿ, ಬೆಡ್‌ ಅನ್ನು ಮುಚ್ಚಿಟ್ಟು ಮೂರು ದಿನಗಳ ಹಿಂದೆಯೇ ಪರಾರಿಯಾಗಿದ್ದಾನೆ. ಕೊಲೆಯಾದ ಮಹಿಳೆಯನ್ನು ಸಾಕ್ಷಿ ಕಂಬಾರ (20) ಎಂದು ಗುರುತಿಸಲಾಗಿದೆ. ಪರಾರಿಯಾದ ಪತಿಯ ಹೆಸರು ಆಕಾಶ್ ಎಂದು ತಿಳಿದುಬಂದಿದೆ. ಪತಿ-ಪತ್ನಿಯರ ನಡುವಿನ ಕೌಟುಂಬಿಕ ಕಲಹ ಅಥವಾ ಇತರ ಕಾರಣಗಳ ಹಿನ್ನೆಲೆಯಲ್ಲಿ ಈ ಕೊಲೆ…

Read More

ಪ್ರತಿಷ್ಠಿತ ಡಿಸಿಸಿ ಬ್ಯಾಂಕ್‌ ಚುನಾವಣೆ: ಬೆಳಗಾವಿ ಸಹಕಾರಿ ಸಮರ ತಾರಕಕ್ಕೆ!

16 ನಿರ್ದೇಶಕ ಸ್ಥಾನಗಳಿಗೆ ಅ. 19 ರಂದು ಮತದಾನ; ಕತ್ತಿ, ಜಾರಕಿಹೊಳಿ ಬಣಗಳ ನಡುವೆ ಜಿದ್ದಾಜಿದ್ದಿ ಬೆಳಗಾವಿ: ಜಿಲ್ಲೆಯ ಸಹಕಾರ ರಂಗದ ಪ್ರತಿಷ್ಠಿತ ಸಂಸ್ಥೆಯಾದ ಬೆಳಗಾವಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ಚುನಾವಣೆ ಕಣವು ರಣ ರಾಜಕೀಯದಂತೆಯೇ ತಾರಕಕ್ಕೇರಿದೆ. ಅಂದಾಜು ₹ 8,000 ಕೋಟಿ ವಹಿವಾಟು ಹೊಂದಿರುವ ಈ ಬ್ಯಾಂಕಿನ 16 ನಿರ್ದೇಶಕ ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆಯು ಸಾಮಾನ್ಯ ಚುನಾವಣೆಗಿಂತಲೂ ಹೆಚ್ಚಿನ ಕುತೂಹಲ ಮೂಡಿಸಿದ್ದು, ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರು ತಮ್ಮ ತಮ್ಮ ಹಿಡಿತ ಸಾಧಿಸಲು…

Read More