ಜೈಪುರ: ಉದಯಪುರದಲ್ಲಿ 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಜೈಪುರ: ರಾಜಸ್ಥಾನದ ಉದಯಪುರದಲ್ಲಿ 55 ವರ್ಷದ ಮಹಿಳೆಯೊಬ್ಬರು ತನ್ನ 17ನೇ ಮಗುವಿಗೆ ಜನ್ಮ ನೀಡಿ ಆಶ್ಚರ್ಯ ಮೂಡಿಸಿದ್ದಾರೆ. ಮಂಗಳವಾರ (ಆಗಸ್ಟ್ 26) ರೇಖಾ ಗಲಿಯಾ ಎಂಬ ಈ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಈ ವಿಷಯ ಬೆಳಕಿಗೆ ಬಂದಿದೆ. ರೇಖಾ ಅವರು ಈ ಹಿಂದೆ 16 ಮಕ್ಕಳನ್ನು ಹೊಂದಿದ್ದರು. ಅವರಲ್ಲಿ ನಾಲ್ವರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಹುಟ್ಟಿದ ತಕ್ಷಣವೇ ಮೃತಪಟ್ಟಿದ್ದಾರೆ. ಬದುಕುಳಿದಿರುವ ಮಕ್ಕಳಲ್ಲಿ ಐದು ಮಂದಿ ಮದುವೆಯಾಗಿ ತಮ್ಮದೇ ಆದ ಮಕ್ಕಳನ್ನು ಹೊಂದಿದ್ದಾರೆ…

