
ಪೋಟೋ: ನಾಗಪೂರ ದೇವಸ್ಥಾನದ ನಿರ್ಮಾಣ ಹಂತದಲ್ಲಿ ಸ್ಲ್ಯಾಬ ಕುಸಿದು ಬಿದ್ದು 15 ಜನರಿಗೆ ಗಾಯ
ನಾಗಪುರ: ನಿರ್ಮಾಣ ಹಂತದಲ್ಲಿದ್ದ ದೇವಸ್ಥಾನದ ರಚನೆಯೊಂದು ಕುಸಿದು ಬಿದ್ದ ಪರಿಣಾಮ 15 ಮಂದಿ ಕಾರ್ಮಿಕರಿಗೆ ಗಾಯಗಳಾಗಿವೆ. ಈ ಘಟನೆ ಆಗಸ್ಟ್ 9 ರ ಶನಿವಾರ ನಾಗಪುರದಲ್ಲಿ ನಡೆದಿದೆ.
ನಾಗಪುರ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (NMRDA) ಅಡಿಯಲ್ಲಿ ಕೊರಾಡಿ ದೇವಸ್ಥಾನದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆರಂಭದಲ್ಲಿ ಕೆಲವು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಎಲ್ಲ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳನ್ನು ತೆರವುಗೊಳಿಸಲು ಯಂತ್ರೋಪಕರಣಗಳನ್ನು ಬಳಸಲಾಗಿದೆ.
“ಫ್ಲಾಬ್ ಕುಸಿದಾಗ ಜನರು ಕೆಳಗೆ ಬಿದ್ದರು. ಅವರೆಲ್ಲ ರಕ್ತದ ಮಡುವಿನಲ್ಲಿ ಮುಳುಗಿದ್ದರು. ನಾವು ಒಟ್ಟು 9 ಜನರನ್ನು ರಕ್ಷಿಸಿದ್ದೇವೆ. ಅವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ” ಎಂದು ಸ್ಥಳೀಯ ಪ್ರತ್ಯಕ್ಷದರ್ಶಿ ರತ್ನದೀಪ್ ರಂಗರಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಎಂಆರ್‌ಡಿ ಮಹಾನಗರ ಆಯುಕ್ತ ಸಂಜಯ್ ಮೀನಾ, “15-16 ಕಾರ್ಮಿಕರು ಗಾಯಗೊಂಡಿದ್ದಾರೆ. ಯಾರಿಗೂ ಆತಂಕ ಪಡುವಂತದ್ದು ಆಗಿರುವದಿಲ್ಲ ಅವರು ಆಸ್ಪತ್ರೆಯಲ್ಲಿದ್ದಾರೆ. ಕೊರಾಡಿ ದೇವಸ್ಥಾನದ ಕೆಲಸ ನಡೆಯುತ್ತಿತ್ತು. ಎನ್ಎಂಆರ್‌ಡಿಎ ಅಡಿಯಲ್ಲಿ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ಸಂಪೂರ್ಣ ತನಿಖೆಯ ನಂತರ ಘಟನೆ ಹೇಗೆ ಸಂಭವಿಸಿದೆ ಎಂದು ಹೇಳಲಾಗುವದು ಎಂದು ಹೇಳಿದರು ಹಾಗೂ ನಾವು ತನಿಖೆ ನಡೆಸುತ್ತೇವೆ” ಎಂದು ತಿಳಿಸಿದರು.

