
ಕುಂದಗೋಳ: ಪಟ್ಟಣದ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ನಡೆದ ಅಹೋರಾತ್ರಿ ಸಂಗೀತ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಂಸದ ಐ.ಜಿ. ಸನದಿ ಆಗಮಿಸಿ ಸಂಗೀತ ಆಲಿಸಿದರು.
ಈ ವೇಳೆ, ಸುಪ್ರಸಿದ್ಧ ಸಂಗೀತ ಗಾಯಕ ಪದ್ಮಶ್ರೀ ಎಮ್ ವೆಂಕಟೇಶ ಕುಮಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ, ಸಚಿವರು ಮತ್ತು ಇತರ ಗಣ್ಯರು ಸ್ವಲ್ಪ ಸಮಯ ಸಂಗೀತದ ರಸದೌತಣವನ್ನು ಸವಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ, ದಿ ಸವಾಯಿ ಗಂಧರ್ವ ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ ಅರವಿಂದ ಎಂ ಕಟಗಿ ನಾಡಿಗೇರ ಮನೆತನದ ಅರ್ಜುನ ನಾಡಗೇರ, ಶಂಕರಗೌಡ ದೊಡ್ಡಮನಿ, ಬಸವರಾಜ ಬ್ಯಾಹಟ್ಟಿ, ಸಿದ್ದು ಧಾರವಾಡ ಶೇಟ್ಟರ, ಪ್ರಕಾಶಗೌಡ ಪಾಟೀಲ, ಗಣೇಶ ಕೊಕಾಟೆ, ದಿಲೀಪ್ ಕಲಾಲ, ಸತೀಶ ಪಾಟೀಲ, ಪೃಥ್ವಿರಾಜ ಕಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

