ಮುಖ್ಯ ವೈದ್ಯಾಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಿರಾ? ಕುಂದಗೋಳ ಆಸ್ಪತ್ರೆಯಲ್ಲಿ ಡೀಸೆಲ್‌ ಕಳ್ಳಾಟ, ಜನರ ಜೀವಕ್ಕೆ ಬೆಲೆಯಿಲ್ಲ!

Spread the love


ಕುಂದಗೋಳ, ಆಡಳಿತದ ಅಧಃಪತನ:
ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಕಡಿತವಾದಾಗ ಪರ್ಯಾಯ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದ್ದರಿಂದ, ತುರ್ತು ಚಿಕಿತ್ಸೆಗೆ ಬಂದ ರೋಗಿಗಳಿಗೆ ವೈದ್ಯರು ಸಂಬಂಧಿಕರ ಮೊಬೈಲ್ ಫೋನ್ ಟಾರ್ಚ್ ಬೆಳಕಿನಲ್ಲಿ ಹೊಲಿಗೆ ಹಾಕಿದ ಘಟನೆಯು ರಾಜ್ಯದ ಆರೋಗ್ಯ ಇಲಾಖೆಯ ಮುಖಕ್ಕೆ ಮಸಿ ಬಳಿದಿದೆ. ಕೋಟ್ಯಂತರ ರೂಪಾಯಿ ಅನುದಾನ ಪಡೆಯುವ ಆಸ್ಪತ್ರೆಯಲ್ಲಿ ಕನಿಷ್ಠ 20 ಲೀಟರ್ ಡೀಸೆಲ್ ಸಂಗ್ರಹಿಸಿಡಲು ಸಾಧ್ಯವಾಗದಿರುವುದು, ಸಾರ್ವಜನಿಕರ ಜೀವದ ಹಕ್ಕನ್ನು ತುಳಿದು ನಡೆದ ನಾಚಿಕೆಗೇಡಿನ ನಡೆಯಾಗಿರುವ ಅಧಿಕಾರಿಗಳ ಕರ್ತವ್ಯ ಲೋಪದ ಕರಾಳ ಅಧ್ಯಾಯ ಇದಾಗಿದೆ. ಆಸ್ಪತ್ರೆಯ ದುಸ್ಥಿತಿ ನೋಡಿದರೆ, ಇಲ್ಲಿನ ರೋಗಿಗಳಿಗಿಂತ ಮೊದಲು ಈ ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆ (ಸಂಸ್ಥೆ ಸುಧಾರಣೆ) ಬೇಕಾಗಿದೆಯೇ ಎಂಬ ಕಟು ಪ್ರಶ್ನೆ ಉದ್ಭವಿಸುತ್ತದೆ.

ತೀಕ್ಷ್ಣ ಪ್ರಶ್ನೆ: ಡೀಸೆಲ್‌ ಕಳ್ಳಾಟದ ವೇಳೆ ವೈದ್ಯಾಧಿಕಾರಿಗಳೇ, ನೀವು ಏನು ಮಾಡುತ್ತಿದ್ದಿರಿ?
ಮುಖ್ಯ ವೈದ್ಯಾಧಿಕಾರಿಗಳೇ (T.H.O.) ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳೇ (D.H.O.) ತಾವು ಏನು ಮಾಡುತ್ತಿದ್ದಿರಿ? ಜನರ ಜೀವವು ತತ್ತರಿಸುವ ಈ ತುರ್ತು ಸಮಯದಲ್ಲಿ ನಿಮಗೆ ಇಷ್ಟೊಂದು ನಿರ್ಲಕ್ಷ್ಯ ವೇಕೆ? ತಾವು ಕಣ್ಣು ಮುಚ್ಚಿ ಕುಳಿತಿದ್ದಿರಾ? ಸರ್ಕಾರದಿಂದ ವೇತನ ಮತ್ತು ಬೃಹತ್ ಸವಲತ್ತುಗಳನ್ನು ಪಡೆದು, ಕನಿಷ್ಠ ಜವಾಬ್ದಾರಿಯನ್ನೂ ನಿರ್ವಹಿಸದಿರುವ ನಿಮ್ಮ ನೈತಿಕ ಸ್ಥೈರ್ಯ ಸಂಪೂರ್ಣವಾಗಿ ಪತನಗೊಂಡಿದೆ. ನಿಮ್ಮ ಈ ನಿಷ್ಕ್ರಿಯತೆ ಕೇವಲ ಕರ್ತವ್ಯ ಲೋಪವಲ್ಲ, ಇದು ಜನರ ಜೀವದ ಮೇಲಿನ ನೇರ ದ್ರೋಹ ಮತ್ತು ಅತ್ಯಂತ ಕ್ರೂರ ನಿರ್ಲಕ್ಷ್ಯ! ತುರ್ತು ಆರೋಗ್ಯ ಸೇವೆಯ ಇಂತಹ ಗಂಭೀರ ಲೋಪದ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಮೌನವು, ಈ ವ್ಯವಸ್ಥೆಯಲ್ಲಿ ಅಡಗಿರುವ ಭ್ರಷ್ಟಾಚಾರದ ಸಂಶಯವಾಗಿದೆ.

ಯಾರ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಈ ಕ್ಷಮಿಸಲಾರದ ಅಪರಾಧ?
ಜನರ ಜೀವ ಉಳಿಸುವ ಅತ್ಯಂತ ಸೂಕ್ಷ್ಮ ಸ್ಥಳದಲ್ಲಿ ಪದೇಪದೇ ಮರುಕಳಿಸುವ ಈ ದುರಂತಕ್ಕೆ ನೇರ ಹೊಣೆಗಾರರು ಆಸ್ಪತ್ರೆಯ ಕಾರ್ಯಾಚರಣೆಯ ಸಂಪೂರ್ಣ ಉಸ್ತುವಾರಿ ಹೊಂದಿರುವ ತಾಲ್ಲೂಕು ವೈದ್ಯಾಧಿಕಾರಿ (T.H.O.) ಮತ್ತು ದೈನಂದಿನ ಆಡಳಿತ ಹಾಗೂ ನಿರ್ವಹಣಾ ಕಾರ್ಯಗಳನ್ನು ನೋಡಿಕೊಳ್ಳುವ ಆಡಳಿತಾಧಿಕಾರಿ (Administrative Officer). ಜನರೇಟರ್ ಸುಸ್ಥಿತಿಯಲ್ಲಿ ಇಡುವುದು ಮತ್ತು ಇಂಧನ ದಾಸ್ತಾನು ಖಚಿತಪಡಿಸಿಕೊಳ್ಳುವುದು ಇವರ ಪ್ರಾಥಮಿಕ ಕರ್ತವ್ಯ. ಈ ಭೀಕರ ಲೋಪಕ್ಕೆ ಇವರ ಮೇಲ್ವಿಚಾರಣೆ ವೈಫಲ್ಯವೇ ಪ್ರಮುಖ ಕಾರಣ. ಪ್ರತ್ಯಕ್ಷವಾಗಿ, ತಾಲ್ಲೂಕು ಆಸ್ಪತ್ರೆಗಳ ಕಾರ್ಯವೈಖರಿ ಮತ್ತು ಅನುದಾನ ಬಳಕೆ ಕುರಿತು ಸೂಕ್ತ ಮೇಲ್ವಿಚಾರಣೆ ಮಾಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (D.H.O.) ಅವರ ನಿರ್ಲಕ್ಷ್ಯವೂ ಈ ಅಧಃಪತನಕ್ಕೆ ಕಾರಣವಾಗಿರುವ ಅಂಶಯ ಸಾರ್ವಜನಿಕರಲ್ಲಿ ಎಡೆಮಾಡಿಕೊಟ್ಟತ್ತಿದೆ.

ನಿರ್ವಹಣಾ ಹಣದ ಲೆಕ್ಕ ಶೀರ್ಷಿಕೆ ಮತ್ತು ದುರ್ಬಳಕೆ ಶಂಕೆ
ಆಸ್ಪತ್ರೆಯಲ್ಲಿ ಡೀಸೆಲ್ ಇರಲಿಲ್ಲ ಎಂಬ ಸುಳ್ಳು ಸರ್ಕಾರಿ ಸೌಲಭ್ಯಗಳ ಅಪಹಾಸ್ಯ ಮಾಡುವ ಕೃತ್ಯ. ತಾಲ್ಲೂಕು ಆಸ್ಪತ್ರೆಯ ನಿರ್ವಹಣೆ (Maintenance) ಮತ್ತು ಕಾರ್ಯಾಚರಣೆಯ ವೆಚ್ಚಗಳಿಗಾಗಿ ಪ್ರತಿ ವರ್ಷವೂ ಬೃಹತ್ ಪ್ರಮಾಣದ ಅನುದಾನವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಲೆಕ್ಕ ಶೀರ್ಷಿಕೆ (Head of Account) ಅಡಿಯಲ್ಲಿ ಬಿಡುಗಡೆಯಾಗುತ್ತದೆ. ಈ ಹಣವು ನಿರ್ವಹಣೆ, ದುರಸ್ತಿ ಮತ್ತು ತುರ್ತು ಇಂಧನ ಖರೀದಿಗಳಂತಹ ಅಗತ್ಯ ಸೇವೆಗಳಿಗಾಗಿಯೇ ಮೀಸಲಿರುತ್ತದೆ. ಕೋಟ್ಯಂತರ ಅನುದಾನ ಲಭ್ಯವಿದ್ದರೂ, ಕನಿಷ್ಠ 20 ಲೀಟರ್ ಡೀಸೆಲ್‌ಗೆ ಹಣ ಇಲ್ಲ ಎನ್ನುವುದು ಅಧಿಕಾರಿಗಳ ಅಸಮರ್ಥತೆ ಅಥವಾ ನಿರ್ವಹಣಾ ಅನುದಾನದ ಸ್ಪಷ್ಟ ದುರ್ಬಳಕೆ ಹಾಗೂ ಡೀಸೆಲ್‌ ಕಳ್ಳತನದ ಸ್ಪಷ್ಟ ಸೂಚನೆಯಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಆರ್ಥಿಕ ಅಕ್ರಮಗಳ ತನಿಖೆ ನಡೆಯಬೇಕಿದೆ.

ತುರ್ತು ಚಿಕಿತ್ಸೆಯ ಭೀಕರತೆ: ಜೀವ ಹೋದರೆ ಹೊಣೆ ಯಾರು?
ಚಿಕಿತ್ಸೆಗಾಗಿ ಅಪಘಾತವಾದ, ತುರ್ತು ಚಿಕಿತ್ಸೆ ಎಂದರೆ ಸಾವು ಬದುಕಿನ ಮಧ್ಯೆ ಹೋರಾಡುವ ರೋಗಿಗಳು ಬರುತ್ತಾರೆ. ರೋಗಿಯು ಒಂದು ಸೆಕೆಂಡ್ ವಿಳಂಬವಾದರೂ ಮರಣ ಹೊಂದುವಂತಹ ವಿಷಮ ಸ್ಥಿತಿ ಅದು. ಇಂತಹ ನಿರ್ಣಾಯಕ ಸಮಯದಲ್ಲಿ, ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಕತ್ತಲಲ್ಲಿ ತಡವರಿಸುವುದು ನೇರ ಮರಣದ ದಾರಿ. ಒಂದು ವೇಳೆ ಈ ನಿರ್ಲಕ್ಷ್ಯದಿಂದಾಗಿ ರೋಗಿಗಳ ಜೀವಕ್ಕೆ ತೊಂದರೆಯಾಗಿ ಜೀವವೇ ಹೋದರೆ, ಇಂತಹ ಹೀನ ಆಡಳಿತಕ್ಕೆ ಕಾರಣರಾದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೇ ಅದರ ಸಂಪೂರ್ಣ ಹೊಣೆಯನ್ನು ಹೊರಬೇಕು! ಜನರ ಜೀವಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಈ ಆಸ್ಪತ್ರೆ ಮತ್ತು ಅದರ ಅಧಿಕಾರಿಗಳು ಕ್ಷಮೆಗೆ ಅರ್ಹರಲ್ಲ.

ಸಾರ್ವಜನಿಕರ ಜೀವದ ಮೇಲೆ ಭಯಾನಕ ಪರಿಣಾಮ
ತುರ್ತು ವಿಭಾಗದಲ್ಲಿ ಕತ್ತಲಲ್ಲೇ ಹೊಲಿಗೆ ಹಾಕುವುದು, ಬಾಣಂತಿಯರು ಮತ್ತು ನವಜಾತ ಶಿಶುಗಳು ಸೊಳ್ಳೆ ಕಾಟ ಮತ್ತು ಗಾಳಿಯಿಲ್ಲದೆ ಒದ್ದಾಡುತ್ತಾ ಅಳುವುದು – ಇದು ಈ ನಿರ್ಲಕ್ಷ್ಯವು ಸಾರ್ವಜನಿಕರ ಮೇಲೆ ಬೀರುವ ಭಯಾನಕ ಪರಿಣಾಮ. ಈ ಘಟನೆಯು ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿರುವ ಬಡ ರೋಗಿಗಳಲ್ಲಿ ಜೀವಭಯವನ್ನು ಹುಟ್ಟಿಸಿದೆ ಮತ್ತು ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಜನರ ಜೀವ ಉಳಿಸುವ ಸ್ಥಳದಲ್ಲಿ ನಡೆದಿರುವ ಈ ಕ್ಷಮಿಸಲಾರದ ಅಪರಾಧವು ಸರಕಾರಿ ಸೌಲಭ್ಯಗಳನ್ನೇ ಅಪಹಾಸ್ಯ ಮಾಡುವಂತಿದೆ.

ನಿರ್ದಾಕ್ಷಿಣ್ಯ ಶಿಸ್ತುಕ್ರಮಕ್ಕೆ ಒತ್ತಾಯ
ಈ ನಾಚಿಕೆಗೇಡಿನ ಘಟನೆಗೆ ಕಾರಣರಾದ ತಾಲ್ಲೂಕು ವೈದ್ಯಾಧಿಕಾರಿ ಮತ್ತು ಆಡಳಿತಾಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು. ಈ ಬಗ್ಗೆ ಸೂಕ್ತ ಮೇಲ್ವಿಚಾರಣೆ ಮಾಡದ ಹಾಗೂ ಪದೇಪದೇ ಇಂತಹ ಲೋಪಕ್ಕೆ ಅವಕಾಶ ನೀಡಿದ ಸಂಬಂಧಪಟ್ಟ ಜಿಲ್ಲಾ ಮತ್ತು ರಾಜ್ಯ ಮಟ್ಟದ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ವಿರುದ್ಧ ಸರ್ಕಾರವು ತಕ್ಷಣವೇ ನಿರ್ದಾಕ್ಷಿಣ್ಯ ಶಿಸ್ತುಕ್ರಮ ಕೈಗೊಳ್ಳಬೇಕು. ಜನರ ಜೀವದ ಜತೆಗೆ ನಡೆಯುತ್ತಿರುವ ಈ ಹೀನವಾದ ಚೆಲ್ಲಾಟವನ್ನು ತಕ್ಷಣವೇ ನಿಲ್ಲಿಸಬೇಕು ಎಂಬುದು ರೋಗಿಗಳು ಮತ್ತು ಸಮಸ್ತ ನಾಗರಿಕರ ಹಾಗೂ ಸಂಗ್ರಾಮಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ದೊಡ್ಡಮನಿಯವರ ಬಲವಾದ ಒತ್ತಾಯವಾಗಿದೆ.

ಕೋಟ: 01
ತಾಲ್ಲೂಕು ಮುಖ್ಯಾವೈದ್ಯಾಧಿಕಾರಿ: ಶಂಕರ ತುಕ್ಕಣ್ಣವರ ಮಾತನಾಡಿ
​”ಘಟನೆ ನಡೆದ ತಕ್ಷಣ ನನಗೆ ಮಾಹಿತಿ ಬಂದಿದೆ. ಜನರೇಟರ್ ಅಳವಡಿಕೆ ಇದ್ದರೂ, ಅದರಲ್ಲಿ ಡೀಸೆಲ್ ಸಂಗ್ರಹ ಇಲ್ಲದ ಕಾರಣಕ್ಕೆ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಈ ನಿರ್ಲಕ್ಷ್ಯಕ್ಕೆ ಕಾರಣರಾದವರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಈ ರೀತಿಯ ಲೋಪ ಮರುಕಳಿಸದಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.”


Leave a Reply

Your email address will not be published. Required fields are marked *