
ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರ ಜನ್ಮದಿನಾಚರಣೆಯ ಅಂಗವಾಗಿ ಗುರುವಾರದಂದು (ನ.27) ಹುಬ್ಬಳ್ಳಿ ನಗರದ ವಿವಿಧ ಭಾಗಗಳಲ್ಲಿ 100ಕ್ಕೂ ಹೆಚ್ಚು ಬಡ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿಯ ಹಳೆಯ ಕೋರ್ಟ್ ಪಕ್ಕದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದ ಆವರಣ ಮತ್ತು ಶ್ರೀ ಸಿದ್ದಾರೂಢ ಸ್ವಾಮಿ ರೈಲ್ವೆ ನಿಲ್ದಾಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ ನಿರ್ಗತಿಕರಿಗೆ ಚಾದರ್ (ಕಂಬಳಿ) ಮತ್ತು ರಗ್ಗುಗಳನ್ನು ವಿತರಿಸಲಾಯಿತು. ಚಳಿಗಾಲದ ಆರಂಭದಲ್ಲಿ ಅಗತ್ಯ ವಸ್ತುಗಳ ವಿತರಣೆಯು ಬಡವರಿಗೆ ದೊಡ್ಡ ನೆರವು ನೀಡಿದೆ.
ಈ ಸಂದರ್ಭದಲ್ಲಿ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಡಾ. ವಿಜಯ ಎಂ. ಗುಂಟ್ರಾಳ ಅವರು ಮಾತನಾಡಿ, ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರ ಜನ್ಮದಿನದ ಪ್ರಯುಕ್ತ ಸಮಾಜದ ನಿರ್ಗತಿಕರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದರು.
ಈ ಸೇವಾ ಕಾರ್ಯಕ್ರಮದಲ್ಲಿ ಗಂಗಮ್ಮ ಸಿದ್ರಾಮಪುರ, ಅನಿತಾ ಈನಗೊಂಡ, ಲಕ್ಷ್ಮೀ ಬೇತಾಪಲ್ಲಿ, ಪಾರವ್ವ ಹೊಸಮನಿ, ಶರಣಪ್ಪ ಅಮರಾವತಿ, ಭಾರತಿ ಬೆನಸಮಟ್ಟಿ, ರಾಧಾ ಬಾಗಲಾಡ್, ಪರಶುರಾಮ್ ಕಡಕೋಳ, ಎಸ್ಟುರೆಮ್ಮ ಭಂಡಾರಿ, ಹನುಮಂತ ತಳಗೇರಿ, ಒಬಳಮ್ಮ ಕಡಕೋಳ, ಪಡೆವ್ವಾ ಹಾವರಾಗಿ, ಮಹೇಶ ಮಾದರ, ಗಾಳೆಪ್ಪಾ ರಣತೂರ, ಆನಂದ ಸವಣೂರ, ರವಿ ನಂದ್ಯಾಳ, ನಿಖಿಲ್ ಹೊಸಮನಿ ಸೇರಿದಂತೆ ಸಂಘದ ಹಲವು ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

