ತಲಪಾಡಿಯಲ್ಲಿ ಭೀಕರ ಅಪಘಾತ ಆಟೋ-ಬಸ್ ಡಿಕ್ಕಿ: ನಾಲ್ವರು ಮಹಿಳೆಯರು, ಮಗು ಸೇರಿ ಆರು ಜನ ಸ್ಥಳದಲ್ಲೇ ದುರ್ಮರಣಆಟೋ ಚಾಲಕನ ಸ್ಥಿತಿ ಚಿಂತಾಜನಕ

Spread the love

ಮಂಗಳೂರು, ಆ.28 – ಮಂಗಳೂರಿನ ಉಳ್ಳಾಲ ಸಮೀಪದ ತಲಪಾಡಿ ಟೋಲ್ ಗೇಟ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ ಆರುಬಜನ ಮೃತಪಟ್ಟಿರುವ ದುಃಖದ ಸುದ್ದಿ ವರದಿಯಾಗಿದೆ.

ಮಧ್ಯಾಹ್ನದ ವೇಳೆ ಕೆಸಿ ರೋಡ್ ದಿಕ್ಕಿನಿಂದ ತೆರಳುತ್ತಿದ್ದ ಆಟೋ ರಿಕ್ಷಾ ಮತ್ತು ಬಸ್ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ರಿಕ್ಷಾ ಸಂಪೂರ್ಣ ಚೂರುಚೂರುಗೊಂಡಿದ್ದು, ಒಳಗಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿದೆ.

ಮೃತರಲ್ಲಿ ನಾಲ್ವರು ಮಹಿಳೆಯರು ಹಾಗೂ ಒಂದು ಮಗು ಸೇರಿ ಒಟ್ಟು 06, ಜನ, ಇವರು ಎಲ್ಲಾ ಕೆಸಿ ರೋಡ್ ಮೂಲದವರಾಗಿರಬಹುದು ಎಂಬ ಮಾಹಿತಿ ಲಭಿಸಿದೆ. ಗಂಭೀರ ಗಾಯಗೊಂಡಿರುವ ಆಟೋ ಚಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ತೀವ್ರತೆ ಖಂಡಿಸಿ ಸ್ಥಳೀಯರು ಮೌನ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *