ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಪೋಷಕ–ಶಿಕ್ಷಕರ ಮಹಾಸಭೆ ಯಶಸ್ವಿ: ಜವಾಬ್ದಾರಿ ಹಂಚಿಕೆಗೆ ಡಿಸಿ ಕರೆ

ಜಿಲ್ಲಾ ಮಟ್ಟದ ಪೋಷಕ–ಶಿಕ್ಷಕರ ಮಹಾಸಭೆ ಯಶಸ್ವಿಯಾಗಿ ನೆರವೇರಿತು ಹುಬ್ಬಳ್ಳಿ ನ.14: ಪ್ರಸಕ್ತ ಸಾಲಿನ ಮಕ್ಕಳ ದಿನಾಚರಣೆಯನ್ನು ರಾಜ್ಯ ಸರ್ಕಾರದ ಸೂಚನೆಯಂತೆ ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಜಾಗೃತಿ ಮೂಡಿಸಿ, ಅವರ ಜವಾಬ್ದಾರಿಯನ್ನು ನೆನಪಿಸುವ ಉದ್ದೇಶದಿಂದ ಇಂದು ಜಿಲ್ಲೆಯಾದ್ಯಂತ 896 ಶಾಲೆ ಮತ್ತು ಕಾಲೇಜುಗಳಲ್ಲಿ ಪೋಷಕ–ಶಿಕ್ಷಕರ ಮಹಾಸಭೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ. ರಾಯನಾಳ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ರಾಯನಾಳ ಗ್ರಾಮ ಪಂಚಾಯತ್, ಕರ್ನಾಟಕ ಪಬ್ಲಿಕ್…

Read More

🚨 ಕೋಳಿವಾಡದಲ್ಲಿ ಬೀಗ ಮುರಿದು ಕಳ್ಳತನ: ₹6.20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

🚨 ಕೋಳಿವಾಡದಲ್ಲಿ ಬೀಗ ಮುರಿದು ಕಳ್ಳತನ: ₹6.20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಹುಬ್ಬಳ್ಳಿ: ನಗರ ಸಮೀಪದ ಕೋಳಿವಾಡ ಗ್ರಾಮದಲ್ಲಿ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು, ಅಡುಗೆ ಮನೆಯ ಪೆಟ್ಟಿಗೆಯಲ್ಲಿ ಇರಿಸಿದ್ದ ಅಂದಾಜು ₹6.20 ಲಕ್ಷ ಮೌಲ್ಯದ 62 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಕಳ್ಳತನದ ಘಟನೆಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಾರ್ಯನಿಮಿತ್ತ ಹೊರ ಹೋದಾಗ ಕೃತ್ಯಗ್ರಾಮದ ನಿವಾಸಿ ಮಂಜುನಾಥ ಸಣಕಲ್ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮಂಜುನಾಥ ಸಣಕಲ್…

Read More

ಚಿನ್ನ-ಬೆಳ್ಳಿ ವ್ಯಾಪಾರಸ್ಥರ ಸರಫ್ ಸಂಘದಿಂದ ಹುಬ್ಬಳ್ಳಿಯಲ್ಲಿ ರಾಜ್ಯೋತ್ಸವ ಆಚರಣೆ

​ ಹುಬ್ಬಳ್ಳಿ: ಚಿನ್ನ ಬೆಳ್ಳಿ ವ್ಯಾಪಾರಸ್ಥರ ಸರಫ್ ಸಂಘದ ಹುಬ್ಬಳ್ಳಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ​ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಪರಶುರಾಮ ಚಿಲ್ಲಾಳ ಮತ್ತು ಉತ್ತರ ಕರ್ನಾಟಕ ಅಧ್ಯಕ್ಷರಾದ ಶ್ರೀ ಗೋವಿಂದ ನಿರಂಜನ್ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಪೊಲೀಸ್ ಅಧಿಕಾರಿಗಳಾದ ಶ್ರೀ ಪ್ರಶಾಂತ ಜಾದವ್, ಗಣೇಶ ಮಂಡಲ ಅಧ್ಯಕ್ಷರಾದ ಶ್ರೀ ದೇವದಾಸ್ ಹಬೀಬಿ ಹಾಗೂ ಗಾಲ್ಫ್ ಗ್ರೌಂಡ್ ಅಸೋಸಿಯೇಷನ್ ಅಧ್ಯಕ್ಷರಾದ ವೆಂಕಟೇಶ ಹಬೀಬಿ ಅವರು…

Read More

ವಿಮಾನ ನಿಲ್ದಾಣಗಳಿಗೆ ನಾಮಕರಣ ಒತ್ತಾಯ: ನಾಳೆ ಹುಬ್ಬಳ್ಳಿಯಲ್ಲಿ ಬೃಹತ್ ಮನವಿ ಮೆರವಣಿಗೆಗೆ ಕರೆ

ಹುಬ್ಬಳ್ಳಿ: ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಕರ್ನಾಟಕದ ನಾಲ್ಕು ಪ್ರಮುಖ ಮಹನೀಯರ ಹೆಸರನ್ನು ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು, ಕನ್ನಡಾಭಿಮಾನಿಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಒಗ್ಗೂಡಿ ನಾಳೆ (ಅ. 31, ಶುಕ್ರವಾರ) ಬೃಹತ್ ಮೆರವಣಿಗೆ ಹಾಗೂ ಮನವಿ ಅರ್ಪಣೆಗೆ ಕರೆ ನೀಡಿವೆ. ಸಾಮಾಜಿಕ ಹೋರಾಟಗಾರ ಶಿವಾನಂದ ಮುತ್ತಣ್ಣವರ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕಳೆದ ವರ್ಷವೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ವಿಧಾನಮಂಡಲದಲ್ಲಿ ನಿರ್ಣಯಿಸಿ, ಬೆಳಗಾವಿ…

Read More

ಹುಬ್ಬಳ್ಳಿಯಲ್ಲಿ ‘ವೋಟ್ ಚೋರ್ ಗದ್ದಿ ಛೋಡ್’ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ: ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್

ಹುಬ್ಬಳ್ಳಿ: ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷವು, ನಗರದಲ್ಲಿ ‘ವೋಟ್ ಚೋರ್ ಗದ್ದಿ ಛೋಡ್’ (ಮತಗಳ್ಳತನ ಮಾಡಿದವರು ಅಧಿಕಾರ ಬಿಟ್ಟು ಹೋಗಲಿ) ಎಂಬ ಹೆಸರಿನ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿತು. ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಅವರು ಹಳೇ ಹುಬ್ಬಳ್ಳಿಯ ಬೀರಬಂದ್ ಓಣಿಯ ಮುಖ್ಯ ಸರ್ಕಲ್‌ನಲ್ಲಿ ಈ ಅಭಿಯಾನವನ್ನು ಉದ್ಘಾಟಿಸಿದರು. ​ಈ ವೇಳೆ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ದೇಶದ ವಿವಿಧೆಡೆ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಚುನಾವಣಾ…

Read More

ವಿಶ್ವ ಪಾರ್ಶ್ವವಾಯು ದಿನ: ಹುಬ್ಬಳ್ಳಿಯಲ್ಲಿ ನಾಳೆ ಜನಜಾಗೃತಿ ವಾಕಾಥಾನ್; ಶಾಸಕ ಮಹೇಶ್ ಟೆಂಗಿನಕಾಯಿ ಅವರಿಂದ ಚಾಲನೆ, ನೂರಾರು ವಿದ್ಯಾರ್ಥಿಗಳ ಭಾಗಿ

ಹುಬ್ಬಳ್ಳಿ: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಬಾಲಾಜಿ ಆಸ್ಪತ್ರೆಯ ವತಿಯಿಂದ ಅಕ್ಟೋಬರ್ 29ರಂದು (ನಾಳೆ) ನಗರದಲ್ಲಿ ಜನಜಾಗೃತಿ ವಾಕಾಥಾನ್ ಹಮ್ಮಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಬಾಲಾಜಿ ಆಸ್ಪತ್ರೆ ಆವರಣದಿಂದ ಹೊರಡಲಿರುವ ಈ ಜಾಥಾಕ್ಕೆ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಚಾಲನೆ ನೀಡಲಿದ್ದಾರೆ. ಆಸ್ಪತ್ರೆಯ ಚೇರ್ಮನ್ ಡಾ. ಕ್ರಾಂತಿಕಿರಣ್ ಅವರು ವಾಕಾಥಾನ್‌ನ ನೇತೃತ್ವ ವಹಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ವಾಕಾಥಾನ್ ಆಸ್ಪತ್ರೆಯಿಂದ ಆರಂಭಗೊಂಡು, ಕೋರ್ಟ್ ಮುಂಭಾಗದ ರಸ್ತೆ, ಶಿರೂರ ಪಾರ್ಕ್, ಆರ್ಟ್ ಕಾಲೇಜು,…

Read More

​ವೋಟ್ ಕಳವು ಆರೋಪ: “ಕಾಂಗ್ರೆಸ್‌ಗೆ ಮಾತ್ರ ಗೊತ್ತು” – ಶಾಸಕ ಮಹೇಶ್ ಟೆಂಗಿನಕಾಯಿ

ಹುಬ್ಬಳ್ಳಿ: ವೋಟ್ ಕಳವು (ಚೋರಿ) ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಮಾಡಿದೆ, ಬಿಜೆಪಿಗೆ ಅದರ ಅಗತ್ಯವಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಟೆಂಗಿನಕಾಯಿ, “ವೋಟ್ ಕಳವು ಮಾಡುವ ಅಗತ್ಯ ಬಿಜೆಪಿಗೆ ಇಲ್ಲ. ಒಂದು ವೇಳೆ ನಾವೇ ವೋಟ್ ಕಳವು ಮಾಡುತ್ತಿದ್ದರೆ, ಈ ಬಾರಿಯ ಚುನಾವಣೆಯಲ್ಲಿ 400 ರಿಂದ 500 ಸೀಟುಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದಿತ್ತು. ವೋಟ್ ಕಳವಿನ ಸಂಸ್ಕೃತಿ…

Read More