ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಸಭೆ: ನಿಯಮ ಪಾಲನೆಗೆ ಸಿಇಒ ಭುವನೇಶ ಪಾಟೀಲ ಸೂಚನೆ

ಧಾರವಾಡ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕ್‌ಗಳು ತಮ್ಮ ವ್ಯವಹಾರಗಳಲ್ಲಿ ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಸೂಚಿಸಿದರು. ಮಾ.10 ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಹಾಗೂ ಜಿಲ್ಲಾ ಮಟ್ಟದ ಸಲಹಾ ಸಮಿತಿ (ಡಿಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಹಕರಿಗೆ,…

Read More

ಧಾರವಾಡ: ಕಸದ ಗುಡ್ಡಕ್ಕೆ ಆವರಿಸಿದ ಬೆಂಕಿ; ವಿಷಯುಕ್ತ ಹೊಗೆಯಿಂದ ಕಂಗೆಟ್ಟ ಜನರಿಂದ ರಸ್ತೆ ತಡೆ ಪ್ರತಿಭಟನೆ

ಧಾರವಾಡ: ನಗರದ ಹೊಸಯಲ್ಲಾಪುರದಲ್ಲಿರುವ ಕಸದ ವಿಲೇವಾರಿ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ವಿಷಯುಕ್ತ ಹೊಗೆ ಆವರಿಸಿದ್ದು, ಇದರಿಂದ ಆಕ್ರೋಶಗೊಂಡ ನಾಗರಿಕರು ಸೋಮವಾರ ಹುಬ್ಬಳ್ಳಿ-ಧಾರವಾಡ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ​ಹೊಸಯಲ್ಲಾಪುರದ ಕಸದ ಗುಡ್ಡಕ್ಕೆ ಸೋಮವಾರ ಮುಂಜಾನೆ ಬೆಂಕಿ ಹತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆ ಇಡೀ ಪ್ರದೇಶ ಹೊಗೆಮಯವಾಗಿದೆ. ಈ ಭಾಗದಿಂದ ಹೊರಹೊಮ್ಮಿದ ಗಾಢವಾದ ವಿಷಯುಕ್ತ ಹೊಗೆಯು ಗಾಂಧಿನಗರ, ಹೊಸಯಲ್ಲಾಪುರ ಹಾಗೂ ಟೋಲನಾಕಾ ಸೇರಿದಂತೆ ಹಲವು ಬಡಾವಣೆಗಳನ್ನು ಆವರಿಸಿಕೊಂಡಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಉಸಿರಾಟದ…

Read More

​ಮೀಡಿಯಾ ಫೆಸ್ಟ್-2026ಕ್ಕೆ ಚಾಲನೆ: ಎಐ ಮತ್ತು ಆಧುನಿಕ ತಂತ್ರಜ್ಞಾನ ಪತ್ರಿಕೋದ್ಯಮದ ಹೊಸ ದಿಕ್ಸೂಚಿ – ಕುಲಪತಿ ಪ್ರೊ. ಎ. ಎಂ. ಖಾನ್

ಧಾರವಾಡ: ಮಾ.09: ವಿಶ್ವದ ಮಾಧ್ಯಮ ಮುಕ್ತವಾಗಿದೆ. ಒಬ್ಬರಿಂದ ಒಬ್ಬರಿಗೆ ಮಾಹಿತಿಯನ್ನು ತಲುಪಿಸುವುದು ಮಾಧ್ಯಮದ ಕಾರ್ಯವಾಗಿದೆ. ಹಳೆಯ ಕಾಲದ ಪತ್ರಿಕೋದ್ಯಮ ಬದಲಾಗಿದೆ. ಹೊಸ ಹೊಸ ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ನಿಂದ ಪತ್ರಿಕಾ ರಂಗಕ್ಕೆ ಹೊಸ ದಿಕ್ಸೂಚಿ ಮೂಡಿದೆ. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮೀಡಿಯಾ ಫೆಸ್ಟ್ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು. ಅವರು ಇಂದು (ಮಾ.09) ಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ…

Read More

​ಮುಳ್ಳಹಳ್ಳಿಯಲ್ಲಿ ‘ಮಾಯ್ ಪಬ್ಲಿಕ್ ಸಮಾಚಾರ’ ಸುದ್ದಿ ವಾಹಿನಿಯ ಆ್ಯಪ್ ಲೋಕಾರ್ಪಣೆ

ಧಾರವಾಡ: ಸತ್ಯನಿಷ್ಠ ಸುದ್ದಿಗಳ ಪ್ರಸಾರ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದೊಂದಿಗೆ, ಯುವ ಪತ್ರಕರ್ತ ಗಿರೀಶ ಘಾಟಗೆ ಅವರ ಸಾರಥ್ಯದಲ್ಲಿ ಆರಂಭವಾಗಿರುವ ‘ಮಾಯ್ ಪಬ್ಲಿಕ್ ಸಮಾಚಾರ’ (My Public Samachar) ಸುದ್ದಿ ವಾಹಿನಿಯ ಮೊಬೈಲ್ ಆ್ಯಪ್ ಅನ್ನು ಶನಿವಾರ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ​ಕುಂದಗೋಳ ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ ಶ್ರೀ ಚನ್ನವೀರೇಶ್ವರ ವಿರಕ್ತಮಠದ ವತಿಯಿಂದ ಆಯೋಜಿಸಲಾಗಿದ್ದ ಬಸವ ಪುರಾಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯದಲ್ಲಿ ಈ ಆ್ಯಪ್ ಲೋಕಾರ್ಪಣೆಗೊಂಡಿತು. ​ಶ್ರೀಗಳ ಆಶೀರ್ವಚನ ​ಕಾರ್ಯಕ್ರಮದಲ್ಲಿ ಆ್ಯಪ್ ಬಿಡುಗಡೆ ಮಾಡಿ ಆಶೀರ್ವಚನ…

Read More

ಮಿತ ಸಮಯದಲ್ಲಿ ಓದುವ ಕಥೆಗಳು ಇಂದಿನ ಅಗತ್ಯ: ಡಾ. ಶ್ರೀಧರ ಹೆಗಡೆ ಭದ್ರನ್ ಅಭಿಪ್ರಾಯ

​ಧಾರವಾಡ: ಇಂದಿನ ಯಾಂತ್ರಿಕ ಜೀವನದಲ್ಲಿ ದೀರ್ಘವಾದ ಕಥೆಗಳನ್ನು ಓದುವ ವ್ಯವಧಾನ ಯಾರಿಗೂ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಮಿತ ಸಮಯದಲ್ಲಿ ಹೇಳುವ ಮತ್ತು ಓದುವ ಕಥೆಗಳೇ ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಉಪನ್ಯಾಸಕ ಡಾ. ಶ್ರೀಧರ ಹೆಗಡೆ ಭದ್ರನ್ ತಿಳಿಸಿದರು. ​ನಗರದ ಕ.ವಿ.ವಿ. ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಡಾ. ಬಸವರಾಜ ಸಾದರ ಅವರು ಸಂಪಾದಿಸಿದ ‘ಮಿತಸಮಯ’ ಮಹಿಳಾ ಕಥಾ ಸಂಚಯ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ಕಥಾ ಸಂಕಲನದಲ್ಲಿ ಹತ್ತು ಜನ ಕಥೆಗಾರ್ತಿಯರು ವಿಭಿನ್ನ ಶೈಲಿ ಹಾಗೂ…

Read More

ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಬದಲಾವಣೆಗಾಗಿ ಜೆಡಿಯು ಬೆಂಬಲಿಸಿ: ಶ್ರೀಶೈಲಗೌಡ ಕಮತರ ಕರೆ

​ಧಾರವಾಡ: ನಗರದ ಶ್ರೀನಗರದಲ್ಲಿ ಇತ್ತೀಚೆಗೆ ಜೆಡಿಯು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜೆಡಿಯು ಜಿಲ್ಲಾ ಅಧ್ಯಕ್ಷರಾದ ಶ್ರೀಶೈಲಗೌಡ ಕಮತರ ಅವರು ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಲು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಾರ್ವಜನಿಕರು ಜೆಡಿಯು ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ​ಜೆಡಿಯು ಪಕ್ಷವು ಪ್ರಜಾಪ್ರಭುತ್ವ ಹಾಗೂ ಸಮಾಜವಾದಿ ತಳಹದಿಯ ಮೇಲೆ ಭಾರತವನ್ನು ಕಟ್ಟಲು ಗಾಂಧಿ ತತ್ವ ಮತ್ತು ಮೌಲ್ಯಗಳನ್ನು ಪಾಲಿಸುತ್ತಾ ಬಂದಿದೆ. ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಸ್ಪೂರ್ತಿ…

Read More

ಕುರುಬಗಟ್ಟಿಯಲ್ಲಿ ಪೋಷಕ–ಶಿಕ್ಷಕರ ಮಹಾಸಭೆ: ವೃತ್ತಿ ಮೇಳದ ಮೂಲಕ ಗಮನ ಸೆಳೆದ ವಿದ್ಯಾರ್ಥಿಗಳು

​ಧಾರವಾಡ: ತಾಲ್ಲೂಕಿನ ಕುರುಬಗಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಪೋಷಕ-ಶಿಕ್ಷಕರ ಮಹಾಸಭೆ ಹಾಗೂ ವಿಶೇಷ ವೃತ್ತಿ ಮೇಳ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಪುಂಡಲೀಕ ಗುಂಡಗೋವಿ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ, ಶಾಲಾ ಚಟುವಟಿಕೆಗಳಲ್ಲಿ ಪೋಷಕರ ಸಹಭಾಗಿತ್ವದ ಅಗತ್ಯವನ್ನು ಒತ್ತಿ ಹೇಳಿದರು. ​ಸಭೆಯಲ್ಲಿ ನಡೆದ ಪೋಷಕ-ಶಿಕ್ಷಕರ ಸಂವಾದದಲ್ಲಿ ಮಕ್ಕಳ ಕಲಿಕಾ ಪರಿಸರ ನಿರ್ಮಾಣ ಹಾಗೂ ಶೈಕ್ಷಣಿಕ ಪ್ರಗತಿಯ ಕುರಿತು ಸುದೀರ್ಘ ಚರ್ಚೆ ನಡೆಯಿತು. ಶಿಕ್ಷಣ ಎನ್ನುವುದು ಕೇವಲ ನೌಕರಿಗಾಗಿ ಸೀಮಿತವಾಗಬಾರದು; ಅದು ಜ್ಞಾನದ ವಿಕಾಸ ಹಾಗೂ…

Read More

ಟೀಕೆ-ಟಿಪ್ಪಣಿಗಳಿಗೆ ಜಗ್ಗುವವನು ನಾನಲ್ಲ; ನನ್ನದು ಅಭಿವೃದ್ಧಿ ಮಂತ್ರ: ಶಾಸಕ ಎನ್.ಎಚ್. ಕೋನರಡ್ಡಿ

ಅಣ್ಣಿಗೇರಿ: “ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ನಾನು ಎಂದಿಗೂ ರಾಜಕೀಯ ಮಾಡುವುದಿಲ್ಲ. ಅನಗತ್ಯ ಟೀಕೆ-ಟಿಪ್ಪಣಿಗಳಿಗೆ ಜಗ್ಗುವವನು ನಾನಲ್ಲ, ನನ್ನ ಕೆಲಸವೇ ನನಗೆ ಅಭಿವೃದ್ಧಿಯ ಮಂತ್ರವಾಗಿದೆ,” ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಹೇಳಿದರು. ​ಅಣ್ಣಿಗೇರಿ ಪಟ್ಟಣದ ಯುಜಿಡಿ (ಒಳಚರಂಡಿ) ಯೋಜನೆಗೆ 124 ಕೋಟಿ ರೂ. ಅನುದಾನ ಮೀಸಲಿಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ನಗರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಅಭಿನಂದನೆ ಸಲ್ಲಿಸಲು ಶನಿವಾರ…

Read More

ಕರ್ನಾಟಕ ಬಜೆಟ್ 2026-27: ಧಾರವಾಡ ಜಿಲ್ಲೆಯ ಪಾಲಿಗೆ ಸಿಕ್ಕಿದ್ದೇನು? ಇಲ್ಲಿದೆ ವಿವರ

​ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026-27ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಶೈಕ್ಷಣಿಕ ಕಾಶಿ ಧಾರವಾಡ ಜಿಲ್ಲೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ. ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಗಳಿಗೆ ಸ್ಪಂದಿಸಿರುವ ಸರ್ಕಾರ, ಶಿಕ್ಷಣ, ಉದ್ಯೋಗ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಭರಪೂರ ಅನುದಾನ ಘೋಷಿಸಿದೆ. ​ನ್ಯಾಯಾಂಗ ಮತ್ತು ಶಿಕ್ಷಣಕ್ಕೆ ಹೈಟೆಕ್ ಸ್ಪರ್ಶ: ಧಾರವಾಡ ಜಿಲ್ಲೆಯ ನ್ಯಾಯಾಂಗ ವ್ಯವಸ್ಥೆಯನ್ನು ಆಧುನೀಕರಿಸಲು 110 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾಯೋಗಿಕವಾಗಿ ‘ಇ-ಕೋರ್ಟ್’ ಸ್ಥಾಪನೆಗೆ ನಿರ್ಧರಿಸಲಾಗಿದೆ. ಇನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ 110 ಕೋಟಿ…

Read More

​ಕುಂದಗೋಳ ತಾ.ಪಂ ಇಒ ಜಗದೀಶ ಕಮ್ಮಾರ ಉಡುಪಿಯ ಹೆಬ್ರಿಗೆ ವರ್ಗಾವಣೆ: ಕುಂದಗೊಳಕ್ಕೆ ಅಳ್ಳಾವರ ಇಒ ಪ್ರಶಾಂತ ತುರಕಾಣಿಗೆ ಹೆಚ್ಚುವರಿ ಪ್ರಭಾರ

ಧಾರವಾಡ: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ಬದಲಾವಣೆಗಳಾಗಿದ್ದು, ಕುಂದಗೋಳ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ​ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳ ಆದೇಶದನ್ವಯ, ಕುಂದಗೋಳ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಶ್ರೀ ಜಗದೀಶ ಎಸ್. ಕಮ್ಮಾರ ಅವರನ್ನು ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕು ಪಂಚಾಯತ್‌ನ ತೆರವಾಗಿರುವ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಗದೀಶ ಕಮ್ಮಾರ ಅವರನ್ನು ಮಾರ್ಚ್…

Read More