ಬೀದಿ ಬದಿ ವ್ಯಾಪಾರಿಗಳಿಗೆ ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕೆ ಅನುಮತಿ ಕೋರಿ ಮನವಿರಾಮ ರಹೀಮ ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ಶಾಸಕ ಕೋನರಡ್ಡಿ ಮೂಲಕ ತಹಶೀಲ್ದಾರರಿಗೆ ಮನವಿ

Spread the love

ನವಲಗುಂದ: ಸ್ಥಳೀಯ ಬಸ್ ನಿಲ್ದಾಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕಡಲೆಕಾಯಿ, ಶೇಂಗಾ, ಲಿಂಬಿಹುಳಿ, ಹಣ್ಣು ಇತ್ಯಾದಿಗಳನ್ನು ವ್ಯಾಪಾರ ಮಾಡಲು ಅನುಮತಿಯನ್ನು ನೀಡುವಂತೆ ಆಗ್ರಹಿಸಿ ರಾಮ ರಹೀಮ ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಮಂಗಳವಾರ ಶಾಸಕ ಎನ್.ಹೆಚ್. ಕೋನರಡ್ಡಿ ಹಾಗೂ ಶಿರೇಸ್ತದಾರ ಗಣೇಶ ಚಳ್ಳಕೆರೆ ಅವರ ಮುಖಾಂತರ ತಹಶೀಲ್ದಾರವರಿಗೆ ಮನವಿ ಸಲ್ಲಿಸಲಾಯಿತು.

ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಅನುಕೂಲವಾಗುವಂತೆ ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಸಂಘವು ಮನವಿ ಪತ್ರದಲ್ಲಿ ಒತ್ತಾಯಿಸಿದೆ.

ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಾಬುಶ್ಯಾ ಮಕಾಂದಾರ, ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ವಿಕ್ರಂ ಕುರಿ, ಇರ್ಫಾನಶ್ಯಾ ಮಕಾಂದಾರ, ತಬರೇಜ ನಿಲಿ, ಮಹಮ್ಮದಯಾಸಿನ ಖಾಜಿ, ಸಲೀಮ ಮಕಾಂದಾರ, ಮಾಹಿದ್ ಜಮಾದಾರ, ಸದ್ದಾಂ ಅಣ್ಣಿಗೇರಿ, ಮಲಂಗ ಜಮಾದಾರ, ನೂರ ಅಣ್ಣಿಗೇರಿ, ಇಮಾಮಶ್ಯಾ ಮಕಾಂದಾರ, ರೋಷನ್ ನರಗುಂದ, ಅಸ್ಲಮ್ ಖಾಜಿ, ಮಬೂಸಾಬ ಜಮಾದಾರ, ಇಸ್ಮಾಯಿಲ್ ನದಾಫ್, ಹುಸೇನ್ ಹಳ್ಳಿಕೇರಿ, ರಾಜೇಸಾಬ ಒಂಟಿ, ರಹಿಮಾನ ಧಾರವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *