ಕಳಸ ಗ್ರಾಮದ ಅಂಬಿಗರ ಚೌಡಯ್ಯ ಭವನ ಪೂರ್ಣಕ್ಕೆ ಷಣ್ಮುಖಪ್ಪ ಶಿವಳ್ಳಿಗೆ ಮನವಿ: 50 ಮೂಟೆ ಸಿಮೆಂಟ್‌ ನೆರವು ಭರವಸೆ

Spread the love

ಕುಂದಗೋಳ: ಕುಂದಗೋಳ ವಿಧಾನಸಭಾ ಕ್ಷೇತ್ರದ ಕಳಸ ಗ್ರಾಮದಲ್ಲಿ ಅಪೂರ್ಣಗೊಂಡಿರುವ ಶ್ರೀ ಅಂಬಿಗರ ಚೌಡಯ್ಯ ಸಮುದಾಯ ಭವನ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಶ್ರೀ ಅಂಬಿಗರ ಚೌಡಯ್ಯ ಯುವಕ ಮಂಡಳಿ ಮಿತ್ರರು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಷಣ್ಮುಖಪ್ಪ ಎಸ್. ಶಿವಳ್ಳಿ ಅವರಿಗೆ ಮನವಿ ಸಲ್ಲಿಸಿದರು.

​ಕಳಸ ಗ್ರಾಮದಲ್ಲಿ ಷಣ್ಮುಖಪ್ಪ ಶಿವಳ್ಳಿ ಅವರನ್ನು ಭೇಟಿ ಮಾಡಿದ ಯುವಕ ಮಂಡಳಿಯ ಸದಸ್ಯರು, ಸಮುದಾಯ ಭವನದ ಕಾಮಗಾರಿಯು ಹಲವು ಕಾರಣಗಳಿಂದ ಅಪೂರ್ಣಗೊಂಡಿದ್ದು, ಇದರಿಂದ ಸಮುದಾಯದ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು. ಭವನವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಕ್ತ ಅನುದಾನ ಮತ್ತು ನೆರವು ನೀಡುವಂತೆ ಮನವಿ ಮಾಡಿದರು.

​ಯುವ ಮಿತ್ರರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀ ಷಣ್ಮುಖಪ್ಪ ಎಸ್. ಶಿವಳ್ಳಿ ಅವರು, ಸಮುದಾಯ ಭವನ ಕಾಮಗಾರಿಯನ್ನು ಪೂರ್ಣಗೊಳಿಸಲು ವೈಯಕ್ತಿಕವಾಗಿ 50 ಚೀಲ ಸಿಮೆಂಟ್‌ ಧನಸಹಾಯ ನೀಡುವುದಾಗಿ ಘೋಷಿಸಿದರು. ಇದರ ಜೊತೆಗೆ, ಭವನದ ಉಳಿದ ಕೆಲಸವನ್ನು ಪೂರ್ಣಗೊಳಿಸಲು ಅಗತ್ಯವಿರುವ ಸರ್ಕಾರಿ ಅನುದಾನವನ್ನು ಒದಗಿಸುವ ಕುರಿತು ಭರವಸೆ ನೀಡಿದರು.

​ಈ ಸಂದರ್ಭದಲ್ಲಿ ಶ್ರೀ ಷಣ್ಮುಖಪ್ಪ ಎಸ್. ಶಿವಳ್ಳಿ ಅವರ ಸಕರಾತ್ಮಕ ಸ್ಪಂದನೆಗೆ ಮೆಚ್ಚುಗೆ ಸೂಚಿಸಿದ ಯುವಕ ಮಂಡಳಿ ಮಿತ್ರರು, ಅವರನ್ನು ಸನ್ಮಾನಿಸಿ ಗೌರವಿಸಿದರು.

Leave a Reply

Your email address will not be published. Required fields are marked *