2025-26 ನೇ ಸಾಲಿನ ಬಿಳಿ ಜೋಳ ಖರೀದಿಗೆ ನೋಂದಣಿ ಪ್ರಾರಂಭ

Spread the love

ಧಾರವಾಡ: 2025-26 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಋತುವಿನ ಬಿಳಿ ಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಜಿಲ್ಲೆಯಲ್ಲಿ ಬಿಳಿ ಜೋಳ ಖರೀದಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯಾಗಿ ನೇಮಕವಾಗಿದೆ. ಜಿಲ್ಲೆಯಲ್ಲಿ ಐದು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಬಿಳಿ ಜೋಳ (ಹೈಬ್ರಿಡ್) ಪ್ರತಿ ಕ್ವಿಂಟಲ್‌ಗೆ ರೂ. 3,699 ಹಾಗೂ ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಲ್‌ಗೆ ರೂ. 3,749 ರಂತೆ ದರ ನಿಗದಿ ಪಡಿಸಲಾಗಿದೆ. ಧಾರವಾಡ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ನವಲಗುಂದ, ಕುಂದಗೋಳ ಮತ್ತು ಕಲಘಟಗಿ ತಾಲೂಕುಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಪ್ರತಿ ರೈತರಿಂದ ಹಿಡುವಳಿಯನ್ನು ಆಧರಿಸಿ ಪ್ರತಿ ಎಕರೆಗೆ 15 ಕ್ವಿಂಟಲ್ ನಂತೆ ಗರಿಷ್ಟ 150 ಕ್ವಿಂಟಲ್ ಬಿಳಿ ಜೋಳವನ್ನು ಖರೀದಿಸಲಾಗುವುದು.

ಆಸಕ್ತ ರೈತರು ಬಯೋಮೆಟ್ರಿಕ್ ಮೂಲಕ ನವೆಂಬರ್ 15, 2025 ರಿಂದ ಮಾರ್ಚ್ 30, 2026 ರವರೆಗೆ ನೋಂದಣಿ ಮಾಡಬೇಕು.

ಮುಂಗಾರು ಋತುವಿನ ಬಿಳಿ ಜೋಳವನ್ನು ನವೆಂಬರ್ 1, 2025 ರಿಂದ ಜನವರಿ 31, 2026 ರವರೆಗೆ ಮತ್ತು ಹಿಂಗಾರು ಋತುವಿನ ಬಿಳಿ ಜೋಳವನ್ನು ಫೆಬ್ರವರಿ 01, 2026 ರಿಂದ ಏಪ್ರಿಲ್ 30, 2026 ರವರೆಗೆ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಎಫ್.ಎ.ಕ್ಯೂ ಮಾನದಂಡಗಳನ್ವಯ ಗುಣಮಟ್ಟದ ಬಿಳಿ ಜೋಳ ಖರೀದಿಸಲಾಗುವುದು.

ರೈತರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರದ ಅಧಿಕಾರಿ, ಸಿಬ್ಬಂದಿಯನ್ನು ಸಂಪರ್ಕಿಸಬಹುದು ಅಥವಾ ಹುಬ್ಬಳ್ಳಿ: 7829573653,
ಕಲಘಟಗಿ ಮತ್ತು ಕುಂದಗೋಳ: 8431371480,
ಧಾರವಾಡ ಮತ್ತು ನವಲಗುಂದ: 9535977495
ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *