

ಕುಂದಗೋಳ: 2025-26ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆಗಾಗಿ ತಾಲೂಕಿನ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸುವ ಕಾರ್ಯಕ್ಕೆ ಕೃಷಿ ಇಲಾಖೆಯು ಸೋಮವಾರ ಅಧಿಕೃತವಾಗಿ ಚಾಲನೆ ನೀಡಿದೆ.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಹಕಾರಿ ರಂಗದ ಧುರಿಣರಾದ ಅರವಿಂದಪ್ಪ ಎಮ್ ಕಟಗಿ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಅವರು ರೈತರಿಗೆ ಬೀಜ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಚಾಲನೆ ನೀಡಿ ಸಹಾಯಕ ಕೃಷಿ ನಿರ್ದೆಶಕಿ ಭಾರತಿ ಮೆಣಶಿನಕಾಯಿ ಮಾತನಾಡಿ ವಿವಿಧ ಕೇಂದ್ರಗಳಲ್ಲಿ ಬೀಜ ವಿತರಣೆ ಆರಂಭ:ತಾಲೂಕಿನ ರೈತ ಸಂಪರ್ಕ ಕೇಂದ್ರದ ಜೊತೆಗೆ ಸಂಶಿ ಉಪಕೇಂದ್ರಗಳಾದ ಶಿರೂರ, ಯಲಿವಾಳ ಮತ್ತು ಯರಗುಪ್ಪಿ ಕೇಂದ್ರಗಳಲ್ಲಿಯೂ ಬಿತ್ತನೆ ಬೀಜ ವಿತರಣೆಯನ್ನು ಆರಂಭಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಹಿಂಗಾರು ಹಂಗಾಮಿಗೆ ಈ ಕೆಳಗಿನ ಪ್ರಮುಖ ಬಿತ್ತನೆ ಬೀಜಗಳು ದಾಸ್ತಾನಿನಲ್ಲಿ ಲಭ್ಯ ಇವೆ:
- ಕಡಲೆ: ಸುಮಾರು 2000 ಕ್ವಿಂಟಲ್
- ಜೋಳ: 50 ಕ್ವಿಂಟಲ್
- ಗೋಧಿ: 15 ಕ್ವಿಂಟಲ್
ರೈತರು ಇಲಾಖೆಯ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಬೀಜ ಪಡೆಯಲು ದಾಖಲೆ ಕಡ್ಡಾಯ
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಲು ಬರುವ ರೈತರು ತಮ್ಮ ಜಮೀನುಗಳ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣಪತ್ರಗಳನ್ನು ತರಬೇಕು ಎಂದು ಭಾರತಿ ಮೆಣಸಿನಕಾಯಿ ಅವರು ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತ ಭಾರತ ರೈತ ಸಮಾಜದ ನವದೆಹಲಿ ಸಂಘದ ಉಪಾಧ್ಯಕ್ಷ ಹೇಮನಗೌಡ ಭಸನಗೌಡ್ರ, ಮಲ್ಲಿಕಾರ್ಜುನ ಕುನ್ನೂರ, ವೀರುಪಾಕ್ಷಪ್ಪ ಗಣಿ, ದೇವೇಂದ್ರಪ್ಪ ಇಚ್ಚಂಗಿ, ಶಂಕ್ರಪ್ಪ ಕುಂದಗೋಳ, ಬಾಬಾಜಾನ ಮಿಶ್ರೀಕೋಟಿ ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

