​ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕ-ಶಿಕ್ಷಕರ ಸಹಕಾರ ಅಗತ್ಯ: ಮಾಬುಸಾಬ ಯರಗುಪ್ಪಿ

Spread the love

ನವಲಗುಂದ: ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸರ್ವತೋಮುಖ ಬೆಳವಣಿಗೆಯು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ, ಅದರಲ್ಲಿ ಪಾಲಕ-ಪೋಷಕರು ಸಹ ಕೈಜೋಡಿಸುವುದು ಅತ್ಯಂತ ಅವಶ್ಯಕ ಎಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಹೇಳಿದರು.

​ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3 ರಲ್ಲಿ ಆಯೋಜಿಸಲಾಗಿದ್ದ ‘ಪೋಷಕರು ಹಾಗೂ ಶಿಕ್ಷಕರ ಸಭೆ’ಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜವಾಬ್ದಾರಿಯುತ ಪೋಷಕರಾಗಿ:

“ಇಂದಿನ ಮಕ್ಕಳು ನಾಳೆಯ ಸುಪ್ರಜೆಗಳು. ಅವರ ಶೈಕ್ಷಣಿಕ ವಿಕಾಸದಲ್ಲಿ ಪೋಷಕರು ಸಮಾನ ಪಾಲುದಾರರಾಗಬೇಕು. ಮಕ್ಕಳು ಶಾಲೆಯಿಂದ ಮನೆಗೆ ಬಂದ ನಂತರ ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು ಹಾಗೂ ಪ್ರತಿದಿನದ ಅಭ್ಯಾಸದ ಕಡೆಗೆ ಗಮನ ಹರಿಸಬೇಕು. ಶಿಕ್ಷಕರು ಮತ್ತು ಪೋಷಕರ ನಡುವೆ ನಿರಂತರ ಸಂವಹನವಿದ್ದಾಗ ಮಾತ್ರ ಮಗುವಿನ ಕೊರತೆಗಳನ್ನು ನೀಗಿಸಲು ಸಾಧ್ಯ,” ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯ ಉದ್ದೇಶ:

ಶಾಲೆಯ ಪ್ರಧಾನ ಗುರುಗಳಾದ ಎಸ್.ಎಸ್. ಜೋಶಿ ಮಾತನಾಡಿ, “ಮಕ್ಕಳ ಶೈಕ್ಷಣಿಕ ಪ್ರಗತಿ, ಶಾಲೆಯಲ್ಲಿ ಲಭ್ಯವಿರುವ ಸೌಲಭ್ಯಗಳು ಹಾಗೂ ಕಲಿಕೆಯ ಆಧುನಿಕ ವಿಧಾನಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲು ಇಂತಹ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಲಿಕೆಯ ಹಾದಿಯಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಿ ಮಕ್ಕಳ ಭವಿಷ್ಯ ರೂಪಿಸಲು ಈ ವೇದಿಕೆ ಸಹಕಾರಿಯಾಗಿದೆ,” ಎಂದರು.

​ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷ ಮುತ್ತಪ್ಪ ಬಿಸನಾಳ, ಮಾಜಿ ಅಧ್ಯಕ್ಷ ಅಡಿವೆಪ್ಪ ಶಿರಸಂಗಿ, ಸದಸ್ಯರಾದ ಕಾಶೀಮಸಾಬ ಮಚಲಿಬಂದರ, ಮಹದೇವಪ್ಪ ಹಂಡಿ, ಮಹಮ್ಮದ ತಾಜುದ್ದಿನ ಹುನಗುಂದ, ಬಾಬುಶ್ಯಾ ಮಕಾಂದಾರ ಉಪಸ್ಥಿತರಿದ್ದರು.

​ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಆರ್.ಬಿ. ಹಳ್ಳಿಕೇರಿ, ಎಮ್.ಎಚ್. ಚಿಕನಾಳ, ಎಂ.ಸಿ. ಚನ್ನಪ್ಪಗೌಡರ, ಕೆ.ಕೆ. ಮಂಕಣಿ, ಕೆ.ಎಫ್. ಬಂತಿ, ಎಂ.ಎನ್. ವಗ್ಗರ ಹಾಗೂ ಅತಿಥಿ ಶಿಕ್ಷಕಿಯರಾದ ಎಸ್.ಎ. ಶಿರಸಂಗಿ, ಬಿಬಿಜಾನ ಸುಂಕದ ಸೇರಿದಂತೆ ಅನೇಕ ಪೋಷಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *