ಮತ್ತಿಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಪೋಷಕ–ಶಿಕ್ಷಕರ ಮಹಾಸಭೆ

Spread the love

ಮತ್ತಿಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಪೋಷಕ–ಶಿಕ್ಷಕರ ಮಹಾಸಭೆ

ಕುಂದಗೋಳ, ನ.14:ಮತ್ತಿಗಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು (14-11-2025) ಮಕ್ಕಳ ದಿನಾಚರಣೆಯನ್ನು ಆಚರಿಸುವ ಭಾಗವಾಗಿ ಪೋಷಕ–ಶಿಕ್ಷಕರ ಮಹಾಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ವೇಳೆ ಶಿಕ್ಷಣದ ಹಕ್ಕು, ಬಾಲ್ಯ ವಿವಾಹ ತಡೆ, ಪೋಕ್ಸೋ ಕಾಯ್ದೆ, ಸಮನ್ವಯ ಶಿಕ್ಷಣ, ದಾಖಲಾತಿ ಆಂದೋಲನ, ಹಾಜರಾತಿ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿ ಕುರಿತ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಗುರುಮಾತೆಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಊರಿನ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದರು. ಜೊತೆಗೆ, ಊರಿನ ಹಿರಿಯರು, ಯುವಕರು, ಪಾಲಕರು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕುಂದಗೋಳ ತಾಲೂಕಿನ ಸಂಗ್ರಾಮ ಸೇನೆಯ ಅಧ್ಯಕ್ಷರು, ಮಹಿಳಾ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಸಹ ಭಾಗವಹಿಸಿ ಮಕ್ಕಳ ಶಿಕ್ಷಣ, ಸುರಕ್ಷತೆ ಮತ್ತು ಬೆಳವಣಿಗೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿದರು.

ಸಭೆಯು ಮಕ್ಕಳ ಒಟ್ಟಾರೆ ಅಭಿವೃದ್ಧಿಗೆ ಪೋಷಕರು, ಶಿಕ್ಷಕರು ಮತ್ತು ಸಮುದಾಯವನ್ನೂ ಒಳಗೊಂಡ ಸಮಗ್ರ ಜವಾಬ್ದಾರಿಯ ಮಹತ್ವವನ್ನು ನೆನಪಿಸುವ ವೇದಿಕೆಯಾಯಿತು.

Leave a Reply

Your email address will not be published. Required fields are marked *