ಪಂ. ಜಾಲೀಹಾಳ ಶ್ರೀನಿವಾಸಾಚಾರ್ಯರ ಪುಣ್ಯ ಸ್ಮರಣೆ: ಕಾಶಿಯಿಂದ 3 ದಿನಗಳ ಆನ್‌ಲೈನ್ ಗೀತಾ ಜ್ಞಾನ ಯಜ್ಞ

Spread the love

ಧಾರವಾಡ:ಪಂಡಿತರಾಜ ಜಾಲೀಹಾಳ ಶ್ರೀನಿವಾಸಾಚಾರ್ಯರ 45ನೇ ವರ್ಷದ ಪುಣ್ಯತಿಥಿ ಹಾಗೂ ಶ್ರೀ ಗೀತಾ ಜಯಂತಿ ನಿಮಿತ್ತ ಮೂರು ದಿನಗಳ ಕಾಲ ‘ಶ್ರೀ ಭಗವದ್ಗೀತಾ ಜ್ಞಾನ ಯಜ್ಞ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾಶೀ ಕ್ಷೇತ್ರದ ವಾರಣಾಸಿಯ ಪಂ. ಸುಕೇಶಾಚಾರ್ಯ ಜಾಲೀಹಾಳ ಅವರು ನಾಳೆಯಿಂದ (ನವೆಂಬರ್ 30) ಡಿಸೆಂಬರ್ 2 ರವರೆಗೆ ಆನ್‌ಲೈನ್ ಮೂಲಕ ಉಪನ್ಯಾಸ ನೀಡಲಿದ್ದಾರೆ.

​ಈ ಮೂರು ದಿನಗಳ ಕಾಲ ಪ್ರತಿದಿನ ಸಾಯಂಕಾಲ 6:30 ರಿಂದ 7:30 ರವರೆಗೆ ಶ್ರೀ ಭಗವದ್ಗೀತೆಯ ಸಾರ ಮತ್ತು ಶ್ರೀ ಗುರು ವೈಭವ ಕಾವ್ಯ ಕುರಿತು ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

​ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಆನ್‌ಲೈನ್ ಲಿಂಕ್‌ಗಾಗಿ ಸೇತುರಾಮಾಚಾರ್ಯ ಹುನಗುಂದ ಅವರನ್ನು ದೂರವಾಣಿ ಸಂಖ್ಯೆ 6361466787 ಮೂಲಕ ಸಂಪರ್ಕಿಸಲು ಕೋರಲಾಗಿದೆ.

ಸೇತುರಾಮಾಚಾರ್ಯ ಹುನಗುಂದ, ಗಾಂಧಿ ನಗರ, ಧಾರವಾಡ ಇವರು ಪ್ರಕಟಣೆಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *