ಮಳೆಹಾನಿ: ಕುಂದಗೋಳದಲ್ಲಿ ಹೆಸರು, ಉದ್ದು,ಸೇರಿದಂತೆ ವಿವಿಧ ಬೆಳೆ ನಾಶ, ಪರಿಶೀಲನೆ ನಡೆಸಿದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಂಡ
Recent Views 9 ಕುಂದಗೋಳ: ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹೆಸರು ಮತ್ತು ಉದ್ದು ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯಮಟ್ಟದ ಅಧಿಕಾರಿಗಳ ತಂಡ ಸೋಮವಾರದಂದು ತಾಲ್ಲೂಕಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿತು. ಪ್ರಾಧಿಕಾರದ ಅಧಿಕಾರಿ ಮಂಜುಳಮ್ಮ ನೇತೃತ್ವದ ತಂಡವು ಕುಂದಗೋಳ, ಶಿರೂರ, ಬಸಾಪೂರ, ಹಿರೇನೇರ್ತಿ, ಮುಳ್ಳೋಳ್ಳಿ, ಯರಿನಾರಾಯಣಪುರ ಮತ್ತು ಬೆನಕನಹಳ್ಳಿ ಸೇರಿದಂತೆ…

