ಮುರಳಿ ಸಾವಜಿ ಹೋಟೆಲ್ ಮೇಲೆ ಅಬಕಾರಿ ದಾಳಿ, ಅಕ್ರಮ ಮದ್ಯ ವಶ: ಶಾಸಕರ ಕ್ಷೇತ್ರದಲ್ಲಿ ಕಳ್ಳ ದಂಧೆಗೆ ಆಕ್ರೋಶ
Recent Views 54 ನವಲಗುಂದ: ಪಟ್ಟಣದಲ್ಲಿರುವ ‘ಮುರಳಿ ಸಾವಜಿ ಹೋಟೆಲ್’ ಮತ್ತು ಅದರ ಮಾಲೀಕ ರಾಜು ದೊಂಗಡಿ ಅವರ ಮನೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ವಿವಿಧ ಬ್ರಾಂಡ್‌ಗಳ ಅಕ್ರಮ ಮದ್ಯ ಮತ್ತು ಬೀರ್ ವಶಪಡಿಸಿಕೊಂಡಿದ್ದಾರೆ. ಈ ಘಟನೆ ಶಾಸಕ ಎನ್.ಎಚ್. ಕೊನರಡ್ಡಿ ಅವರ ಕ್ಷೇತ್ರದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಾಳಿ ವೇಳೆ ಒಟ್ಟು ₹18,955 ಮೌಲ್ಯದ ಮದ್ಯ ಮತ್ತು ₹960 ನಗದು ವಶಪಡಿಸಿಕೊಳ್ಳಲಾಗಿದೆ…

