ಗುಡಿಸಾಗರ ಜನರ ಜೀವದ ಜೊತೆ ಚೆಲ್ಲಾಟ, ಕಲುಷಿತ ಕೆರೆ ನೀರು ಕುಡಿದು16 ಕ್ಕು ಹೆಚ್ಚು ಗ್ರಾಮಸ್ಥರು ಅಸ್ಥವ್ಯಸ್ತ
Recent Views 12 ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಕಲುಷಿತಗೊಂಡ ಕೆರೆ ನೀರು ಕುಡಿದು ಮಕ್ಕಳು, ವೃದ್ಧರು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಮಂಗಳವಾರ ಸಂಜೆ ನಡೆದ ಈ ಘಟನೆ, ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸ್ಥಳೀಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಡ ಮತ್ತು ಅಮಾಯಕ ಜನರ ಜೀವದೊಂದಿಗೆ ಚೆಲ್ಲಾಟವಾಡಿದ ಈ ಅಮಾನವೀಯ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯೇ ದುರಂತಕ್ಕೆ ಕಾರಣವಾಯೀತೆ:ಗುಡಿಸಾಗರ ಕೆರೆಯ…

