ಮಿತಸಮಯ ಮಹಿಳಾ ಕಥಾಸಂಚಯ: ಧಾರವಾಡದಲ್ಲಿ ವಿನೂತನ ಕಾರ್ಯಕ್ರಮ
Recent Views 12 ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಸೆ:22 ರಂದು ಸಂಜೆ 5:30ಕ್ಕೆ ಚೆನ್ನಬಸವ್ವ ಸಾದರ ಅವರ ಸ್ಮರಣಾರ್ಥವಾಗಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಈ ವಿನೂತನ ಕಾರ್ಯಕ್ರಮಕ್ಕೆ “ಮಿತಸಮಯ ಮಹಿಳಾ ಕಥಾಸಂಚಯ” ಎಂದು ಹೆಸರಿಡಲಾಗಿದ್ದು, ಹತ್ತು ಜನ ಪ್ರತಿಭಾವಂತ ಮಹಿಳಾ ಕಥೆಗಾರ್ತಿಯರು ತಾವು ಬರೆದ ಹತ್ತು ಹೊಸ ಕಥೆಗಳನ್ನು ತಲಾ ಹತ್ತು ನಿಮಿಷಗಳ ಅವಧಿಯಲ್ಲಿ ವಾಚನ ಮಾಡಲಿದ್ದಾರೆ. ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ…

