ಸಂವಿಧಾನದ ಆದರ್ಶಗಳು ನಮ್ಮನ್ನು ಉಜ್ವಲ ಭವಿಷ್ಯಕ್ಕೆ ಕೊಂಡೊಯ್ಯಲಿ: ಮುತ್ತಪ್ಪ ಬಿಸನಾಳ

Spread the love

ನವಲಗುಂದ: ಭಾರತವು ವಸಾಹತುಶಾಹಿ ಆಡಳಿತದಿಂದ ಮುಕ್ತವಾಗಿ, ಔಪಚಾರಿಕವಾಗಿ ಗಣರಾಜ್ಯವಾಗಿ ಘೋಷಿತವಾದ ಈ ದಿನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ. ಸಂವಿಧಾನದ ಉನ್ನತ ಆದರ್ಶಗಳು ನಮ್ಮನ್ನು ಉಜ್ವಲ ಭವಿಷ್ಯದತ್ತ ಕೊಂಡೊಯ್ಯಲಿ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ ಬಿಸನಾಳ ಆಶಯ ವ್ಯಕ್ತಪಡಿಸಿದರು.

​ಪಟ್ಟಣದ ಹಳ್ಳದ ಓಣಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3 ರಲ್ಲಿ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತೀಯರೆಲ್ಲರೂ ಏಕತೆಯ ಭಾವನೆಯೊಂದಿಗೆ ದೇಶದ ಪ್ರಗತಿಯ ಹಾದಿಯಲ್ಲಿ ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು.

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಮಾತನಾಡಿ, 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬರುವ ಮೂಲಕ ಭಾರತವು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಉದಯಿಸಿತು. ಈ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಶ್ರಮದ ಫಲವಾಗಿ ನಾವಿಂದು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಜಾತಿ ಮತ್ತು ಧರ್ಮದ ಗಡಿಗಳನ್ನು ಮೀರಿ ‘ಭಾರತೀಯರು’ ಎಂಬ ಒಂದೇ ಗುರುತಿನಡಿ ನಾವೆಲ್ಲರೂ ದೇಶದ ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

​ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಎಸ್. ಎಸ್. ಜೋಶಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಅಡಿವೆಪ್ಪ ಶಿರಸಂಗಿ, ಸದಸ್ಯರಾದ ಕಾಶೀಮಸಾಬ ಮಚಲಿಬಂದರ, ಮಹಮ್ಮದಲಿ ಮಿರ್ಜಿ, ಮಹಮ್ಮದತಾಜುದ್ದಿನ ಹುನಗುಂದ, ಬಾಬುಷಾ ಮಕಾಂದಾರ, ಪ್ರಕಾಶ ಕಂದ್ಲಿ ಉಪಸ್ಥಿತರಿದ್ದರು.

​ಅಲ್ಲದೆ ಎಸ್‌ಡಿಎಂಸಿ ಸದಸ್ಯರಾದ ಶಶಿಕಲಾ ಪಾಟೀಲ್, ಅನ್ನಪೂರ್ಣ ದೊಡ್ಡಮನಿ, ಸಹ ಶಿಕ್ಷಕರಾದ ಆರ್.ಬಿ. ಹಳ್ಳಿಕೇರಿ, ಎಮ್.ಎಚ್. ಚಿಕನಾಳ, ಸುರೇಶ ಭಜಂತ್ರಿ ಹಾಗೂ ಶಿಕ್ಷಕಿಯರಾದ ಎಂ.ಸಿ. ಚನ್ನಪ್ಪಗೌಡ್ರ, ಶಿವಲೀಲಾ ನಾಗೂರ, ಕೆ.ಎಫ್. ಬಂತಿ, ಕೆ.ಕೆ. ಮಂಕಣಿ, ಎಂ.ಎನ್. ವಗ್ಗರ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು.

Leave a Reply

Your email address will not be published. Required fields are marked *