ಕಾರ್ಮಿಕ ಇಲಾಖಾ ಕಿಟ್: ಅರ್ಜಿ ಸಲ್ಲಿಸಲು ನ.15 ಕೊನೆ ದಿನ; ಮಧ್ಯವರ್ತಿಗಳ ಅವಕಾಶವಿಲ್ಲ; ಫಲಾನುಭವಿಗಳು ನೇರವಾಗಿ ಉಪಯೋಗ ಪಡೆಯಲಿ

Spread the love

ಧಾರವಾಡ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೇ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಗೌಂಡಿ ಸೇಪ್ಟಿ ಕಿಟ್ ವಿತರಣೆಗಾಗಿ ಕುಂದಗೋಳ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳೆ ನೇರವಾಗಿ ಅರ್ಹರು ಅರ್ಜಿ ಸಲ್ಲಿಸಬೇಕು. ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ಕುಂದಗೋಳ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕಿ ರಜನಿ ಹಿರೇಮಠ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೇ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಗೌಂಡಿ ಸೇಪ್ಟಿ ಕಿಟ್ ವಿತರಣೆಗಾಗಿ ಎಲೆಕ್ಟ್ರೀಷಿಯನ್ಸ್ ಸೇಪ್ಟಿ, ವೆಲ್ಡರ್ ಸೇಪ್ಟಿ, ಪೇಂಟರ್ಸ್ ಸೇಪ್ಟಿ, ಪ್ಲಂಬರ್ ಸೇಪ್ಟಿ ಕಿಟ್‍ಗಳು ಲಭ್ಯವಿದ್ದು, ಇವುಗಳನ್ನು ಪಡೆಯಲು ನೋಂದಾಯಿತ ಅರ್ಜಿದಾರರು ತಮ್ಮ ನವೀಕೃತ ಗುರುತಿನ ಚೀಟಿ, ಆಧಾರ ಕಾರ್ಡ್, ಈ ಹಿಂದೆ ಕಿಟ್‍ಗಳನ್ನು ಪಡೆಯದಿರುವ ಕುರಿತು ಸ್ವಯಂ ಘೋಷಣಾ ಪತ್ರ ಮತ್ತು ತಮ್ಮ ಮೊಬೈಲ್ ಸಂಖ್ಯೆಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಅಗತ್ಯ ದಾಖಲಾತಿಗಳೊಂದಿಗೆ ಕುಂದಗೋಳ ತಾಲೂಕಿನ ಸರಕಾರಿ ಇಲಾಖೆಗಳ ಸಂಕೀರ್ಣ ಕಟ್ಟಡದಲ್ಲಿನ ಕಾರ್ಮಿಕ ನಿರೀಕ್ಷಣಾ ಕಚೇರಿಗೆ ನವೆಂಬರ 15, 2025 ರೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿಗಳನ್ನು ನಿಯಮಾನುಸಾರ ಮತ್ತು ಜೇಷ್ಟತೆಯ ಆಧಾರದ ಮೇಲೆ ಪರಿಗಣಿಸಿ, ಸೌಲಭ್ಯಗಳನ್ನು ಅರ್ಹರಿಗೆ ವಿತರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *