
ಧಾರವಾಡ, ನ. 01: ಕರ್ನಾಟಕ ವಿದ್ಯಾವರ್ಧಕ ಸಂಘವು (ಕೆ.ವಿ.ವಿ.ಎಸ್.) 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶನಿವಾರದಂದು ‘ನಾಡದೇವಿಗೆ ನಮನ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂಘದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದ ಅಂಗವಾಗಿ ಕು. ದೀಪ್ತಿ ಪಾಟೀಲ ಹಾಗೂ ಅವರ ಸಂಗಡಿಗರು ಸುಶ್ರಾವ್ಯವಾಗಿ ನಾಡಗೀತೆಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸೇರಿದಂತೆ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಧ. ಹೊರಕೇರಿ, ಗುರು ಹಿರೇಮಠ, ಶ್ರೀಮತಿ ವಿಶ್ವೇಶ್ವರಿ ಬಿ. ಹಿರೇಮಠ, ಡಾ. ಧನವಂತ ಹಾಜವಗೋಳ, ಕೆ.ಎಚ್. ನಾಯಕ, ನಾಗರಾಜ ಹಂಗಳಕಿ, ಎಂ.ಎ. ಚಿಕ್ಕಮಠ, ವಸಂತ ಮುರ್ಡೇಶ್ವರ, ಶ್ರೀನಿವಾಸ ಪಾಟೀಲ, ಗುರುಮೂರ್ತಿ ಯರಗಂಬಳಿಮಠ, ಸುಜಾತಾ ಹಡಗಲಿ, ಆಶಾ ಸೈಯ್ಯದ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

