ಚರಸ್ ಮಾದಕ ಪದಾರ್ಥ ಅಕ್ರಮ ಮಾರಾಟ: ಒರ್ವನ ಬಂಧನ

Spread the love

ಚಿಕ್ಕಮಲ್ಲಿಗವಾಡ ಕ್ರಾಸ್ ಬಸ್ ಸ್ಟ್ಯಾಂಡ್ ಹತ್ತಿರ ಚರಸ್ ಮಾದಕ ಪದಾರ್ಥವನ್ನು ಅಕ್ರಮವಾಗಿ ಮಾರಾಟ ಮಾಡಲು ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಆಧಾರವಾಗಿ, ಧಾರವಾಡ ಜಿಲ್ಲಾ ಪೊಲೀಸರಿಂದ ಯಶಸ್ವಿ ದಾಳಿ ನಡೆಯಿತು. ಈ ವೇಳೆ ಒಬ್ಬ ವ್ಯಕ್ತಿಯನ್ನು ಬಂಧಿಸಿ, ಚರಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗದ ಡಿ.ಎಸ್.ಪಿ ವಿನೋದ ಮುಕ್ತೇದಾರ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಎಸ್. ಕಮತಗಿ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರವೀಣ ಕೋಟಿ ಅವರು ತಮ್ಮ ಸಿಬ್ಬಂದಿಯೊಂದಿಗೆ ನವೆಂಬರ್ 11 ರಂದು ಮಧ್ಯಾಹ್ನ 1.15ಕ್ಕೆ ದಾಳಿ ನಡೆಸಿದರು.

ದಾಳಿಯ ವೇಳೆ ಅಕೀಲ ಅಹ್ಮದ್ (ತಂದೆ ಕುತುಬುದ್ದಿನ್ ಮುನವಳ್ಳಿ, ನಿವಾಸಿ: ನೆಹರುನಗರ, ಅಳ್ನಾವರ, ಧಾರವಾಡ ಜಿಲ್ಲೆ) ಎಂಬ ವ್ಯಕ್ತಿಯಿಂದ 220 ಗ್ರಾಂ ಚರಸ್ (ಅಂದಾಜು ಮೌಲ್ಯ ರೂ. 80,000) ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *