
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಟೋ ಟಿಪ್ಪರ್ ಚಾಲಕರಿಗೆ ಸೋಮವಾರದಂದು ಅಧಿಕೃತ ಗುರುತಿನ ಚೀಟಿ (ID Card) ವಿತರಿಸುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಚಾಲಕರಿಗೆ ಪಾಲಿಕೆ ವತಿಯಿಂದ ಈ ಗುರುತಿನ ಚೀಟಿಗಳನ್ನು ನೀಡಲಾಯಿತು.
,ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಕಾರ್ಮಿಕ ಘಟಕದ (ಶ್ರಮೀಕ ವರ್ಗ) ರಾಜ್ಯ ಅಧ್ಯಕ್ಷ ಮುದುಕೇಶ್ವರ್ ಮಾದರ, ಹಾಗೂ ಮಮತಾ ಬೆಳಗಾಂಕರ್ ಅವರು ಚಾಲಕರಿಗೆ ಗುರುತಿನ ಚೀಟಿ ವಿತರಿಸಿ, ಅವರ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಎಸ್‌ಡಬ್ಲ್ಯೂಎಂ (SWM) ಅಧಿಕಾರಿ ಫರೀದಾ ಮೇಡಂ, ಭೀಮಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶಂಕರ್ ಮಗಳಿ ಹಾಗೂ ಸಂಘಟನೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದು ಚಾಲಕರಿಗೆ ಶುಭ ಕೋರಿದರು. ಪಾಲಿಕೆಯ ಸಿಬ್ಬಂದಿ ವರ್ಗದವರು ಹಾಗೂ ಆಟೋ ಟಿಪ್ಪರ್ ಚಾಲಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

