




ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮೂರು ವರ್ಷಗಳ ಅವಧಿಗೆ ಐವರು ಗಣ್ಯರನ್ನು ಗೌರವ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 12, 2025ರಂದು ನಡೆದ ಕಾರ್ಯಕಾರಿ ಸಮಿತಿಯ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರ ಅನುಮೋದನೆಯ ನಂತರ ನೇಮಕಾತಿ ಅಂತಿಮಗೊಂಡಿದೆ. ಸಂಘದ ನಿಯಮಗಳು ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಈ ನೇಮಕಗಳನ್ನು ಮಾಡಲಾಗಿದೆ.
ಗೌರವ ಉಪಾಧ್ಯಕ್ಷರಾಗಿ ಆಯ್ಕೆಯಾದವರು:
- ಶ್ರೀ ಕೆ.ಬಿ. ನಾವಲಗಿಮಠ: ಕಾನೂನು ತಜ್ಞರು, ಧಾರವಾಡ.
- ಡಾ. ಪಾಂಡುರಂಗ ಪಾಟೀಲ: ಪ್ರಗತಿಪರ ಸಾಮಾಜಿಕ ಚಿಂತಕರು, ಹುಬ್ಬಳ್ಳಿ.
- ಶ್ರೀ ಶ್ರೀನಿವಾಸ ವಾಡಪ್ಪಿ: ಹಿರಿಯ ವಾಗ್ಮಿಗಳು, ಧಾರವಾಡ.
- ಡಾ. ಅಜಿತ್ ಪ್ರಸಾದ ಜೈನ್: ಹಿರಿಯ ಶಿಕ್ಷಣ ತಜ್ಞರು, ಧಾರವಾಡ.
- ಡಾ. ತಮಿಳ ಸೆಲ್ವಿ: ಕನ್ನಡ ಪ್ರಾಧ್ಯಾಪಕರು, ಚೆನ್ನೈ (ಹೊರನಾಡ ಕನ್ನಡಿಗರು).
ಈ ಐವರು ಗೌರವ ಉಪಾಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ.
ಈ ನೇಮಕಾತಿಗಳು ಸಂಘದ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬಲಿವೆ ಎಂದು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.

