​ಲಕ್ಕುಂಡಿಯಲ್ಲಿ ಉತ್ಖನನ: ಕೋಟೆ ವೀರಭದ್ರೇಶ್ವರ ದೇಗುಲದ ಎದುರು ಐತಿಹಾಸಿಕ ‘ಪಾಣಿ ಬಟ್ಟಲು’ ಶಿಲೆ ಪತ್ತೆ

Spread the love

ಗದಗ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ತಾಣವಾದ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಮಹತ್ವದ ಐತಿಹಾಸಿಕ ಶಿಲೆಯೊಂದು ಪತ್ತೆಯಾಗಿದ್ದು, ಇತಿಹಾಸ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

​ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿನ್ನೆಯಿಂದ ಆರಂಭವಾಗಿರುವ ಉತ್ಖನನದಲ್ಲಿ ಇಂದು (ಭಾನುವಾರ) ಈ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಮಣ್ಣು ಅಗೆಯುವ ಸಂದರ್ಭದಲ್ಲಿ ‘ಪಾಣಿ ಬಟ್ಟಲಿನ’ ಆಕಾರವನ್ನು ಹೋಲುವ ವಿಶೇಷವಾದ ಕಲ್ಲು ದೊರೆತಿದೆ.

​ಈ ಶಿಲೆಯು ದೇವಸ್ಥಾನಕ್ಕೆ ಸಂಬಂಧಿಸಿದ ಪುರಾತನ ಕಾಲದ ಅವಶೇಷವಿರಬಹುದು ಅಥವಾ ಪೂಜಾ ಕಾರ್ಯಕ್ಕೆ ಬಳಸುತ್ತಿದ್ದ ಐತಿಹಾಸಿಕ ಕುರುಹು ಇರಬಹುದು ಎಂದು ಶಂಕಿಸಲಾಗಿದೆ. ಲಕ್ಕುಂಡಿಯು ದೇವಾಲಯಗಳ ತವರು ಎಂದೇ ಪ್ರಖ್ಯಾತವಾಗಿದ್ದು, ಇಲ್ಲಿನ ಮಣ್ಣಿನ ಆಳದಲ್ಲಿ ಇತಿಹಾಸದ ಪುಟಗಳು ಅಡಗಿರಬಹುದು ಎಂಬ ಮಾತುಗಳಿಗೆ ಈ ಘಟನೆ ಪುಷ್ಠಿ ನೀಡಿದೆ. ಸದ್ಯ ಪತ್ತೆಯಾಗಿರುವ ಈ ಶಿಲೆಯು ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಉತ್ಖನನ ಮುಂದುವರಿದಂತೆ ಇನ್ನಷ್ಟು ಮಾಹಿತಿಗಳು ಲಭ್ಯವಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *