ಭಾನುವಾರ, 22 Nov 2026 | ಕನ್ನಡ & ರಾಷ್ಟ್ರೀಯ ಸುದ್ದಿ ಪೋರ್ಟಲ್
Karnataka

ಗದಗ | ಆರ್ಯ ಸಂಸ್ಕೃತಿಗೆ ವಿದಾಯ; ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳ ಗೃಹ ಪ್ರವೇಶ: ಕಟ್ಟಿದ ಕೈಗಳಿಗೆ ನಮನ

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ಗದಗ | ಆರ್ಯ ಸಂಸ್ಕೃತಿಗೆ ವಿದಾಯ; ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳ ಗೃಹ ಪ್ರವೇಶ: ಕಟ್ಟಿದ ಕೈಗಳಿಗೆ ನಮನ
  • ಗದಗ: ಮನೆ ಕಟ್ಟಿದವರ ಶ್ರಮವನ್ನು ಸ್ಮರಿಸುವುದರ ಜೊತೆಗೆ, ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶ ಸಾರುವ ವಿಶಿಷ್ಟ ಗೃಹ ಪ್ರವೇಶ ಸಮಾರಂಭವೊಂದು ಗದಗ ಪಟ್ಟಣದಲ್ಲಿ ನಡೆಯಿತು.…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love

ಗದಗ: ಮನೆ ಕಟ್ಟಿದವರ ಶ್ರಮವನ್ನು ಸ್ಮರಿಸುವುದರ ಜೊತೆಗೆ, ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶ ಸಾರುವ ವಿಶಿಷ್ಟ ಗೃಹ ಪ್ರವೇಶ ಸಮಾರಂಭವೊಂದು ಗದಗ ಪಟ್ಟಣದಲ್ಲಿ ನಡೆಯಿತು.

ಪಟ್ಟಣದ ಶೇಖಪ್ಪ ತಮ್ಮಣ್ಣವರ ಅವರ ನೂತನ ನಿವಾಸ **’ರಾಜಗೃಹ’**ದ ಗೃಹ ಪ್ರವೇಶ ಸಮಾರಂಭವು ಸಾಂಪ್ರದಾಯಿಕ ಆಚರಣೆಗಳಿಗಿಂತ ಭಿನ್ನವಾಗಿ, ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಗೌರವ ಸಲ್ಲಿಸುವ ಮೂಲಕ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮನೆ ನಿರ್ಮಾಣದಲ್ಲಿ ಶ್ರಮಿಸಿದ ಕಟ್ಟಡ ಕಾರ್ಮಿಕರ ಕೈಗಳಿಗೆ ನಮನ ಸಲ್ಲಿಸುವ ಉದ್ದೇಶದಿಂದ ‘ಕಟ್ಟಿದ ಕೈಗಳಿಗೆ ನಮನ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾಜದಲ್ಲಿ ಅಸಮಾನತೆ ಮತ್ತು ಶೋಷಣೆಗೆ ಒಳಗಾದ ವಿಧವೆಯರು ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದು ಗೃಹ ಪ್ರವೇಶ ಕಾರ್ಯಕ್ರಮವನ್ನು ನೆರವೇರಿಸಿದ್ದು ವಿಶೇಷವಾಗಿತ್ತು.

ಸಾಮಾನ್ಯವಾಗಿ ಗೃಹ ಪ್ರವೇಶ ಸಮಾರಂಭಗಳಲ್ಲಿ ಕಂಡುಬರುವ ಸಾಂಪ್ರದಾಯಿಕ ಆಚರಣೆಗಳ ಬದಲಾಗಿ, ಸಾಮಾಜಿಕ ನ್ಯಾಯ, ಸಮಾನತೆ, ಸ್ವಾಭಿಮಾನ ಮತ್ತು ಮಾನವೀಯತೆಯ ಮೌಲ್ಯಗಳಿಗೆ ಆದ್ಯತೆ ನೀಡುವ ಮೂಲಕ ಶೇಖಪ್ಪ ತಮ್ಮಣ್ಣವರ ಅವರು ವಿಭಿನ್ನ ಸಂದೇಶ ಸಾರಿದರು.
ಮನೆ ಕಟ್ಟಲು ಬೆವರು ಸುರಿಸಿದ ಶ್ರಮಿಕರನ್ನು ಗೌರವಿಸುವುದು, ಸಮಾಜದ ಅಂಚಿನಲ್ಲಿರುವ ಮಹಿಳೆಯರಿಗೆ ಗೌರವದ ಸ್ಥಾನ ನೀಡುವುದು ಹಾಗೂ ಮಹಾನ್ ಮಾನವತಾವಾದಿಗಳ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಈ ಕಾರ್ಯಕ್ರಮದ ಆಶಯವಾಗಿತ್ತು.

ಎಸ್.ಎನ್.ಬಳ್ಳಾರಿ ಮಾತನಾಡಿ, “ಆರ್ಯ ಸಂಸ್ಕ್ರತಿ ಸಮುದಾಯಗಳನ್ನ ಹೊರಗಿಟ್ಟಿದ್ದರು. ಬಾಬಾ ಸಾಹೇಬ್‌ರು ನಮಗೆ ಸಂವಿಧಾನದ ಮೂಲಕ ಸಮಾನತೆ ಕೊಟ್ಟರು. ನಮ್ಮ ಪೂರ್ವಜರು ತುಪ್ಪ ತಿಂದರು ನಮ್ಮನ್ನು ಪಶುವಿಗಿಂತ ಹೆಚ್ಚು ಹೊಡೆಯುತ್ತಿದ್ದರು. ಅರ್ಯರ ಸಂಸ್ಕೃತಿಗಳಾದ ಹೋಮ್, ಹವನ, ಮನೆಯೊಳಗೆ ಹಸುವನ್ನ ಪ್ರವೇಶ ಮಾಡುವುಂತ ಕಂದಾಚಾರಗಳನ್ನ ತೆಜಿಸಿ ಇವತ್ತು ಬುದ್ಧ ವಂದನೆ ಮೂಲಕ ಮನೆ ಪ್ರವೇಶ ಮಾಡಿದ್ದಯ ವಿಶೇಷವಾದದ್ದರಲ್ಲೆ ವಿಶೇಷ” ಎಂದರು.

ಬಸವರಾಜ ಸೂಳಿಬಾವಿ ಮಾತನಾಡಿ, “ಬುದ್ಧ ಬಸವ ಅಂಬೇಡ್ಕರ್ ದೇವರಲ್ಲ; ನಮ್ಮಂತೆ ನೋವು, ಕಷ್ಟ ಅನುಭವಿಸಿದವರು‌. ಅವರು ಕೊಟ್ಟ ಆದರ್ಶದ ಕಾರಣದಿಂದ ಅವರನ್ನ ದೇವರು ಮಾಡಿದ್ದೆವೆ. ನಾವೇ ದೇವರಾಗಬೇಕು. ‘ಅಕ್ರಮ ಸಂಪಾದನೆ ಮಾಡಿಕೊಂಡವರನ್ನ ಬೇಡಬಾರದು. ಬುದ್ಧ ‘ಉಳ್ಳವರ ಮನೆಗೆ ಹೋಗಿ ಬೇಡಬೇಡಿ, ಇಲ್ಲದವರನ್ನ ಬೇಡಿ. ಯಾಕೆಂದರೆ, ಅವರ ನೋವು, ಪ್ರಾಮಾಣಿಕತೆ, ಅರ್ಥವಾಗುತ್ತದೆ’ ಎಂದಿದ್ದಾರೆ. ಬ್ರಾಹ್ಮಣ್ಯವಾದಿಗಳಿಗೆ ಹಸುವಿನ ಉಚ್ಚೆ ಪವಿತ್ರವಾಗುತ್ತದೆ; ಆದರೆ, ಕುಡಿಯುವ ನೀರು ಶೋಷಿತ ಮನುಷ್ಯ ಮುಟ್ಟಿದರೆ ಅಪವಿತ್ರವಾಗುತ್ತದೆ. ಇದು ದುರಂತ ಈ ನಾಡಿನಲ್ಲಿ. ನಮ್ಮ ಮನಸ್ಸಿನಲ್ಲಿ ಒಂದು ಹಣತೆ ಹಚ್ವುವಂತ ಕೆಲಸ ಆಗಬೇಕು”. ಎಂದರು

ಒಟ್ಟಾರೆ, ‘ರಾಜಗೃಹ’ದ ಗೃಹ ಪ್ರವೇಶ ಕೇವಲ ಒಂದು ಮನೆಯ ಪ್ರವೇಶವಾಗಿರದೆ, ಸಮಾನತೆ, ಸ್ವಾಭಿಮಾನ ಮತ್ತು ಮಾನವೀಯ ಚಿಂತನೆಗಳ ಹೊಸ ಬದುಕಿಗೆ ಮುನ್ನುಡಿ ಬರೆದ ವಿಶಿಷ್ಟ ಕಾರ್ಯಕ್ರಮವಾಗಿ ಗಮನ ಸೆಳೆಯಿತು.

ADVERTISEMENT