
ನವಲಗುಂದ: ತಾಲೂಕಿನ ಅಳಗವಾಡಿ ಶ್ರೀ ಹರಿ ಮಂದಿರದಿಂದ ಪ್ರಾರಂಭಗೊಂಡ ದಿಂಡಿ ಪಾದಯಾತ್ರೆಯು ನರಗುಂದ, ರಾಮದುರ್ಗ, ಮುಧೋಳ, ಜಮಖಂಡಿ, ಉಮರಾಣಿ ಸೇರಿದಂತೆ ಅನೇಕ ಹಳ್ಳಿಗಳ ಮಾರ್ಗವಾಗಿ ಪಯಣಿಸಿ ಶುಕ್ರವಾರ ಮಹಾರಾಷ್ಟ್ರದ ಜತ್ತ ಗ್ರಾಮವನ್ನು ತಲುಪಿತು. ಯಾತ್ರಿಕರ ಆಗಮನದ ಹಿನ್ನೆಲೆ ಜತ್ತ ನಗರದಲ್ಲಿ ಭಕ್ತಿ ಮತ್ತು ಉತ್ಸಾಹದ ವಾತಾವರಣ ನಿರ್ಮಾಣವಾಗಿತ್ತು. ಬೀದಿಗಳಲ್ಲಿ ಪುಷ್ಪಾಲಂಕಾರ ಮಾಡಲಾಗಿದ್ದು, ಭಜನೆ, ಕೀರ್ತನೆಗಳ ಮಧ್ಯೆ ಸಂತ ಮಹಾತ್ಮರಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು. ಭಕ್ತರು ದಿಂಡಿಯ ಯಾತ್ರಿಕರಿಗೆ ನೀರು, ಪ್ರಸಾದ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿ ಆತ್ಮೀಯ ಆತಿಥ್ಯ ತೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಪಾ ಧೋಂಡಿಭಾ ಕಲಾಲ ಅವರು, ಸಂತರ ಸೇವೆ ಮಾಡುವುದು ಮಹಾಪುಣ್ಯಕಾರ್ಯ. ನಾವು ಈ ದಿಂಡಿಯನ್ನು ಜಾತ್ರೆಯ ರೂಪದಲ್ಲಿ ಆಚರಿಸುತ್ತೇವೆ. ಸಂತರ ಸೇವೆ ಭಕ್ತಿಯಿಂದ, ಸ್ವಯಂಪ್ರೇರಣೆಯಿಂದ ಹಾಗೂ ನಿರಹಂಕಾರದಿಂದ ಮಾಡುವ ನಿಸ್ವಾರ್ಥ ಸೇವೆಯಾಗಿದೆ ಎಂದು ಹೇಳಿದರು. ರಾಮರಡ್ಡಿ ಅಣಿಗೇರಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ನಮ್ಮ ಅಳಗವಾಡಿ ದಿಂಡಿ ಯಾತ್ರಿಕರಿಗೆ ಅದ್ದೂರಿ ಸ್ವಾಗತ ನೀಡಿ, ಆಶ್ರಯ ಹಾಗೂ ಊಟದ ವ್ಯವಸ್ಥೆ ಮಾಡುತ್ತಿರುವ ಪಾಪಾ ಕಲಾಲ ಅವರ ಕುಟುಂಬಕ್ಕೆ ಪಾಂಡುರಂಗ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಫಕೀರಪ್ಪ ಸವದತ್ತಿ, ಡಿ.ಎನ್.ಪಾಟೀಲ, ಕಲ್ಲಪ್ಪ ಬೆಳವಣಕಿ, ಗೋಪಾಲ ಅಣ್ಣಿಗೇರಿ, ಶಿವರಡ್ಡಿ ಕನಕರಡ್ಡಿ, ಬಸವರಾಜ ಹಿರೇಹಾಳ, ಮಲ್ಲಪ್ಪ ರೆಡ್ಡರ, ಶಿವಪುತ್ರಪ್ಪ ಕವಳಿಕಾಯಿ, ಸುರೇಶ ಕೋಲಕಾರ, ಮೌನೇಶ ಬಡಿಗೇರ, ಸುರೇಶ ರಾವುತ್, ಶಿವಪ್ಪ ಶಿವಬಸನ್ನರ, ಕೃಷ್ಣಾ ಬೋಸ್ಥೆ, ಮಂಜುನಾಥ ಗೊಂದಳೆ, ಸಂಗಮೇಶ ತಟ್ಟಿ, ಅಶೋಕ್ ಮಾಜಿಗನೂರು, ಬಸವರಾಜ ಹದ್ದಿ, ಶಿವಪ್ಪ ಗುಡಿಸಾಗರ, ಶೇಖಪ್ಪ ಹೊರಕೇರಿ, ಶಿವಪುತ್ರಪ್ಪ ಕುರಿಯವರ, ಸಂತೋಷ ಹಂಬರ, ರಾಮಕೃಷ್ಣ ಹಂಬರ, ಮಾರುತಿ ಯಾಡ್ರಾವಿ, ಶ್ರೀನಿವಾಸ ಕಲಾದಗಿ, ಚನ್ನಪ್ಪ ಕೊಣೂರು, ದುರ್ಗಪ್ಪ ಮಾದರ, ಶ್ರೀಕಾಂತ ತಟ್ಟಿ, ಯಲ್ಲಪ್ಪ ಮುತ್ತಗಿ, ಮಹದೇವಪ್ಪ ಗಾಣಿಗೇರ, ಪುಂಡಲೀಕಪ್ಪ ಜಾಲಕಣ್ಣವರ, ಹಣಮಪ್ಪ ಶಿರಕೋಳ, ನಾಗಪ್ಪ ಹಡಪದ, ಗದಿಗೆಪ್ಪ ಗೊಬ್ಬರಗುಂಪಿ, ಗಿರಿಯಪ್ಪ ಹೆಗ್ಗಣ್ಣವರ, ಮಾರುತಿ ಕಡ್ಲಿಕೊಪ್ಪ, ಪಾಂಡು ಪೂಜಾರ, ಬಸವರಾಜ ಶಿವಬಸಣ್ಣವರ್ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು

