ಧಾರವಾಡ: ವಿಕಲಚೇತನರಿಗೆ ವಿವಿಧ ಸಾಧನ-ಸಲಕರಣೆ ವಿತರಿಸಿದ ಸಚಿವ ಸಂತೋಷ್ ಲಾಡ್

Spread the love

ಧಾರವಾಡ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರಿಗಾಗಿ ನೀಡಲಾಗುವ ವಿವಿಧ ಸಾಧನ ಸಲಕರಣೆಗಳನ್ನು 77ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅವರು ಸೋಮವಾರ ಬೆಳಿಗ್ಗೆ ವಿತರಿಸಿದರು. ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಅಗತ್ಯ ಸಲಕರಣೆಗಳನ್ನು ನೀಡಿ ಸಬಲೀಕರಣಕ್ಕೆ ಒತ್ತು ನೀಡಲಾಯಿತು.

​ಧಾರವಾಡ ಕಲಕೇರಿಯ ಅಕ್ಕಮಹಾದೇವಿ ಅಂಗಡಿ ಅವರಿಗೆ ಬ್ಯಾಟರಿ ಚಾಲಿತ ವ್ಹೀಲ್‌ಚೇರ್, ಕರಡಿಗುಡ್ಡದ ಉಜೇಫ ಶೌಕತಲಿ ನಾಯ್ಕರ ಅವರಿಗೆ ಎಂ.ಆರ್. ಕಿಟ್, ಮಲ್ಲವ್ವ ಚನಮಲ್ಲಪ್ಪ ಕುರಗುಂದ ಅವರಿಗೆ ಕ್ರಚ್ಚಸ್, ಮಡಿಕಿಕೇರಿಯ ಅಭಿಷೇಕ ಪುಂಡಲೀಕ ಭೋವಿ ಅವರಿಗೆ ಶ್ರವಣ ಸಾಧನ ಹಾಗೂ ಕ್ಯಾರಕೊಪ್ಪದ ಮಣಿಕಂಠ ಹೊಂಗಲ ಅವರಿಗೆ ವ್ಹೀಲ್‌ಚೇರ್‍ಗಳನ್ನು ಸಚಿವರು ವಿತರಿಸಿ ಆತ್ಮವಿಶ್ವಾಸ ತುಂಬಿದರು.

​ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಸವಿತಾ ಕಾಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *