ಧಾರವಾಡ: ನವೆಂಬರ್ 17 – ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅರ್ಹ ಸಾಧಕ ಕ್ರೀಡಾಪಟುಗಳು ಹಾಗೂ ಇತರರಿಂದ ವಿವಿಧ ಪ್ರಶಸ್ತಿ ಮತ್ತು ಪ್ರೋತ್ಸಾಹಧನ ನೀಡುವ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಾಗಿ ಆಹ್ವಾನಿಸಿರುವ ಪ್ರಶಸ್ತಿಗಳ ವಿವರ ಹೀಗಿದೆ: ಏಕಲವ್ಯ ಪ್ರಶಸ್ತಿ–2024, ಜೀವಮಾನ ಸಾಧನೆ ಪ್ರಶಸ್ತಿ–2024, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ–2024, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ–2024, ಗುರಿ–ಓಲಂಪಿಕ್ ಪದಕ 2025–2026, ನಗದು ಪುರಸ್ಕಾರ 2023 ಮತ್ತು 2024, ಶೈಕ್ಷಣಿಕ ಶುಲ್ಕ ಮರುಪಾವತಿ 2025–26, ಕ್ರೀಡಾ ವಿದ್ಯಾರ್ಥಿವೇತನ 2025–26.
ಅರ್ಹ ಕ್ರೀಡಾಪಟುಗಳು https://sevasindhu.karnataka.gov.in ವೆಬ್‌ಸೈಟ್ ಮೂಲಕ ಡಿಸೆಂಬರ್ 02, 2025 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2447424 ಅನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

