ಸೋಮವಾರ, 23 Nov 2026 | ಕನ್ನಡ & ರಾಷ್ಟ್ರೀಯ ಸುದ್ದಿ ಪೋರ್ಟಲ್
ಬೆಳಗಾವಿ

ದಸರಾ ರಜೆಯ ಮಜಾ ದುರಂತದಲ್ಲಿ ಅಂತ್ಯ: ಸಿಂಧುದುರ್ಗ ಸಮುದ್ರದಲ್ಲಿ ಮುಳುಗಿ ಬೆಳಗಾವಿಯ ಮೂವರ ಸಾವು

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ದಸರಾ ರಜೆಯ ಮಜಾ ದುರಂತದಲ್ಲಿ ಅಂತ್ಯ: ಸಿಂಧುದುರ್ಗ ಸಮುದ್ರದಲ್ಲಿ ಮುಳುಗಿ ಬೆಳಗಾವಿಯ ಮೂವರ ಸಾವು
  • Spread the love Recent Views 38 ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಕುಟುಂಬಕ್ಕೆ ಆಘಾತ; ನಾಲ್ವರು ನಾಪತ್ತೆ, ಓರ್ವ ಮಹಿಳೆ ಸ್ಥಿತಿ ಗಂಭೀರ ​ಬೆಳಗಾವಿ: ದಸರಾ…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love

ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಕುಟುಂಬಕ್ಕೆ ಆಘಾತ; ನಾಲ್ವರು ನಾಪತ್ತೆ, ಓರ್ವ ಮಹಿಳೆ ಸ್ಥಿತಿ ಗಂಭೀರ

​ಬೆಳಗಾವಿ: ದಸರಾ ರಜೆಗಾಗಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಒಂದೇ ಕುಟುಂಬದ ಮೂವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಈ ದುರಂತದಿಂದ ಲೋಂಡಾ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ.

​ಮೂವರು ಬಾಲಕರು ಸಾವು, ಓರ್ವ ಮಹಿಳೆ ಗಂಭೀರ

​ದುರಂತದಲ್ಲಿ ಮೃತರಾದವರನ್ನು ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ನಿವಾಸಿಗಳಾದ ಇಸ್ರಾರ್ ಕಿತ್ತೂರ (17), ಇಬಾದ್ ಕಿತ್ತೂರ (13) ಮತ್ತು ಅಳ್ಳಾವರ ಮೂಲದ ನಮೀರಾ ಅಕ್ತರ್ (16) ಎಂದು ಗುರುತಿಸಲಾಗಿದೆ.

​ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರಹಾನಾ ಕಿತ್ತೂರ (34) ಎಂಬ ಮಹಿಳೆಯನ್ನು ನೀರಿನೆಡೆಯಿಂದ ಹೊರತೆಗೆಯಲಾಗಿದ್ದು, ಅವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

​ನಾಲ್ವರು ನಾಪತ್ತೆ, ಶೋಧ ಕಾರ್ಯ ಚುರುಕು

​ಸಮುದ್ರದಲ್ಲಿ ಕಣ್ಮರೆಯಾಗಿರುವವರ ಪೈಕಿ ಇರ್ಫಾನ್ ಕಿತ್ತೂರ (36), ಇಕ್ವಾನ್ ಕಿತ್ತೂರ (15) ಹಾಗೂ ಮಹಾರಾಷ್ಟ್ರ ಮೂಲದ ಪರಯಾನ್ ಮನಿಯರ್ (20) ಮತ್ತು ಜಾಕಿರ್ ಮನಿಯರ್ (13) ಸೇರಿದ್ದಾರೆ.

​ಈ ನಾಲ್ವರಿಗಾಗಿ ಸ್ಥಳೀಯ ಪೊಲೀಸ್ ಮತ್ತು ರಕ್ಷಣಾ ತಂಡಗಳು ಸಮುದ್ರ ತೀರದಲ್ಲಿ ತೀವ್ರ ಹುಡುಕಾಟ ನಡೆಸುತ್ತಿವೆ. ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ಹಲವರು ಸಮುದ್ರ ಪಾಲಾಗಿರುವುದು ಲೋಂಡಾ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

ADVERTISEMENT