
ಕುಂದಗೋಳ: ತಾಲ್ಲೂಕಿನ ಚಾಕಲಬ್ಬಿ ಗ್ರಾಮ ಪಂಚಾಯಿತಿಗೆ ಮಂಗಳವಾರದಂದು ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಜಾರಿದೆ. ಒಟ್ಟು 8 ಜನ ಸದಸ್ಯ ಬಲ ಹೊಂದಿರುವ ಚಾಕಲಬ್ಬಿ ಗ್ರಾ.ಪಂ.ನಲ್ಲಿ ಈ ಪ್ರಕ್ರಿಯೆ ನಡೆಯಿತು.
ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಅಂಜುಮಾಬೇಂಗಂ ಇಬ್ರಾಹಿಂಸಾಬ ನಧಾಪ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದೇವಕ್ಕ ದೇವಪ್ಪ ಕಾಳಿ ಅವರು ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ, ಚುನಾವಣೆ ಅಧಿಕಾರಿ ಜಗದೀಶ ಕಮ್ಮಾರ ಅವರು ಅಂಜುಮಾಬೇಂಗಂ ನಧಾಪ್ ಮತ್ತು ದೇವಕ್ಕ ಕಾಳಿ ಅವರನ್ನು ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಘೋಷಿಸಿದರು.

ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಗ್ರಾಮದ ಗುರು-ಹಿರಿಯರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿಯವರು ಸನ್ಮಾನಿಸಿ ಗೌರವಿಸಿದರು.
🤝 ಅಭಿವೃದ್ಧಿಗೆ ಒತ್ತು ನೀಡಲು ಸಂಕಲ್ಪ
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಂಜುಮಾಬೇಂಗಂ ಇ. ನಧಾಪ್ ಅವರು ಮಾತನಾಡಿ, “ಚಾಕಲಬ್ಬಿ ಮತ್ತು ಹೊಸಳ್ಳಿ ಗ್ರಾಮಗಳ ಸರ್ವ ಸದಸ್ಯರನ್ನು ಒಳಗೊಂಡು, ಎರಡೂ ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇದಕ್ಕೆ ಗ್ರಾಮದ ಗುರು-ಹಿರಿಯರ ಸಹಕಾರ ಅತ್ಯಂತ ಮುಖ್ಯ,” ಎಂದು ಹೇಳಿದರು.
ಉಪಾಧ್ಯಕ್ಷರಾದ ದೇವಕ್ಕ ದೇ. ಕಾಳಿ ಅವರು ಮಾತನಾಡಿ, “ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಿ, ನಮ್ಮ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ. ಗ್ರಾಮಸ್ಥರ ಸಹಕಾರ ಬಹಳ ಮುಖ್ಯ,” ಎಂದು ಭರವಸೆ ನೀಡಿದರು.
🏅 ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಿಂದ ಗೌರವ
ಇದೇ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿಯವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವಳ್ಳಿ, “ಸರಿಯಾದ ರೀತಿಯಲ್ಲಿ ಆಡಳಿತ ಮಾಡಿಕೊಂಡು ಹೋಗಬೇಕು. ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು,” ಎಂದು ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಕಾವ್ಯಾ ಯಲ್ಲಪ್ಪ ಬಾರಕೇರ, ಸದಸ್ಯರಾದ ರೇಣುಕಾ ಗುರಪ್ಪ ಮುದೇನಾಯ್ಕರ, ಗುರುನಾಥ ಬಿ. ಹೊನ್ನಿಹಳ್ಳಿ, ಟೋಪಣ್ಣ ಪು. ಕಟಗಿ, ವಿಠ್ಠಲ ಶಿ. ಘಾಟಗೆ, ಹನುಮಂತಪ್ಪ ಮಾ. ಗರಡ್ಡಿ ಸೇರಿದಂತೆ ಮುಖಂಡರಾದ ಈಶ್ವರಗೌಡ ಹಿರೇಗೌಡ್ರ, ವಿ ಎಸ್ ಮಸಾಲಿ, ಶಂಕ್ರಪ್ಪ ದೊಡ್ಡಮನಿ, ನಿಂಗಪ್ಪ ಗೌಡಣ್ಣವರ, ಪುತ್ರಪ್ಪ ಕಟಗಿ,ನಿಂಗನಗೌಡ ಕೆಂಚನಗೌಡ್ರ, ದೇವಪ್ಪ ಕಾಳಿ, ಇಬ್ರಾಹಿಂಮಸಾಬ ನಧಾಪ್, ಗುಳಪ್ಪ ಕಟಗಿ, ಗುರು ಚಲವಾದಿ, ಸಲೀಂ ಕಡ್ಲಿ ಸೇರಿದಂತೆ ಅನೇಕ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

