
ಕುಂದಗೋಳ : ಕರ್ನಾಟಕ ರಾಜ್ಯ ಎಸ್.ಸಿ ಮತ್ತು ಎಸ್.ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ (ರಿ) ರಾಜ್ಯ ಸಂಘಟನೆಯ ಮಹಿಳಾ ಉಪಾಧ್ಯಕ್ಷರಾಗಿ ಕುಂದಗೋಳ ತಾಲ್ಲೂಕಿನ ಶಿಕ್ಷಕಿ ಶ್ರೀಮತಿ ಚಂದ್ರಿಕಾ ಪರಶುರಾಮ (ಎಸ್.ಜೆ) ಅವರನ್ನು ಆಯ್ಕೆ ಮಾಡಲಾಗಿದೆ.
ಸದ್ಯ ವೃತ್ತಿಯಲ್ಲಿ ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಶ್ರೀಮತಿ ಚಂದ್ರಿಕಾ ಎಸ್.ಜೆ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವಾ ನಿಷ್ಠತೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಗುರುತಿಸಿ ಈ ಮಹತ್ವದ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ರಾಜ್ಯ ಮಟ್ಟದ ಸ್ಥಾನಕ್ಕೆ ಆಯ್ಕೆಯಾದ ಶ್ರೀಮತಿ ಚಂದ್ರಿಕಾ ಅವರಿಂದ ಸಂಘದ ಅತ್ಯುನ್ನತವಾದ ಅಭಿವೃದ್ಧಿಗೆ ಕೊಡುಗೆಗಳು ದೊರೆಯಲಿವೆ ಎಂಬ ವಿಶ್ವಾಸವನ್ನು ಸಂಘಟನೆ ವ್ಯಕ್ತಪಡಿಸಿದೆ. ನೂತನವಾಗಿ ಆಯ್ಕೆಯಾದ ಶ್ರೀಮತಿ ಚಂದ್ರಿಕಾ ಅವರನ್ನು ಸಂಘಟನೆಯ ಎಲ್ಲ ಸದಸ್ಯರು ಮತ್ತು ಹಿರಿಯರು ಗೌರವಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

