
ಹುಬ್ಬಳ್ಳಿ: ಚಿನ್ನ ಬೆಳ್ಳಿ ವ್ಯಾಪಾರಸ್ಥರ ಸರಫ್ ಸಂಘದ ಹುಬ್ಬಳ್ಳಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಪರಶುರಾಮ ಚಿಲ್ಲಾಳ ಮತ್ತು ಉತ್ತರ ಕರ್ನಾಟಕ ಅಧ್ಯಕ್ಷರಾದ ಶ್ರೀ ಗೋವಿಂದ ನಿರಂಜನ್ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಪೊಲೀಸ್ ಅಧಿಕಾರಿಗಳಾದ ಶ್ರೀ ಪ್ರಶಾಂತ ಜಾದವ್, ಗಣೇಶ ಮಂಡಲ ಅಧ್ಯಕ್ಷರಾದ ಶ್ರೀ ದೇವದಾಸ್ ಹಬೀಬಿ ಹಾಗೂ ಗಾಲ್ಫ್ ಗ್ರೌಂಡ್ ಅಸೋಸಿಯೇಷನ್ ಅಧ್ಯಕ್ಷರಾದ ವೆಂಕಟೇಶ ಹಬೀಬಿ ಅವರು ಭಾಗವಹಿಸಿದ್ದರು.
ಸಂಘದ ಸದಸ್ಯರುಗಳಾದ ಶ್ರೀ ಈರಣ್ಣ ಹೂಲಿ, ಶ್ರೀ ದಶರಥಸಾ ಮಿಸ್ಕಿನ್, ವಿಠ್ಠಲ್ ಪೂಜಾರಿ, ನಾರಾಯಣ ಝೆಂಢೆ, ಸುವಾಸ ಸವಣೂರ, ಸುರೇಂದ್ರ ಕಾಂಬಳೆ, ರಾಜೇಶ್ ಅಣವೇಕರ, ಪ್ರಸಾದ್ ಮೆಹರವಾಡೆ, ಸಚ್ಚಿನ್ ಮಿಸ್ಕಿನ, ಮಂಜು ಹಬಿಬ ಸೇರಿದಂತೆ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದು, ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರಿದರು

