
ಕುಂದಗೋಳ: ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಹಿಂದೂ ಸಾಮ್ರಾಜ್ಯೋತ್ಸವದ ಪ್ರತೀಕ, ಧರ್ಮೋದ್ಧಾರಕ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 396 ನೇ ಜಯಂತ್ಯುತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.
ನಂತರ ಮಾತನಾಡಿದ ತಹಶೀಲ್ದಾರ್ ರಾಜು ಮಾವರಕರ ಅವರು, “ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ ಮತ್ತು ನೀತಿವಂತ ಆಡಳಿತಕ್ಕೆ ಹೆಸರಾದವರು. ಅವರ ಶೌರ್ಯ, ಹೋರಾಟದ ಹಾದಿ ಹಾಗೂ ಅವರ ಜೀವನದ ಆದರ್ಶಗಳು ಇಂದಿನ ಸಮಾಜಕ್ಕೆ ಪ್ರೇರಣೆಯಾಗಿವೆ. ಪ್ರತಿಯೊಬ್ಬರೂ ಶಿವಾಜಿ ಮಹಾರಾಜರ ದೇಶಪ್ರೇಮವನ್ನು ಅಳವಡಿಸಿಕೊಳ್ಳಬೇಕು,” ಎಂದು ಅವರ ಸಾಧನೆಗಳನ್ನು ಕೊಂಡಾಡಿದರು.

ಈ ಸಮಯದಲ್ಲಿ ಕೃಷಿಕ ಸಮಾಜ ನವದೆಹಲಿ ರಾಜ್ಯಾಧ್ಯಕ್ಷರಾದ ಮಾಣಿಕ್ಯ ಚಿಲ್ಲೂರ ಅವರು ಶಿವಾಜಿ ಮಹಾರಾಜರ ಸಾಧನೆಗಳ ಕುರಿತು ಮಾತನಾಡಿದರು. ಶಿಕ್ಷಕರಾದ ಎಸ್. ಸಿ. ಶ್ಯಾನವಾಡ ಅವರು ಉಪನ್ಯಾಸ ನೀಡುತ್ತಾ ಶಿವಪ್ರಭುಗಳ ಆದರ್ಶಗಳನ್ನು ಸ್ಮರಿಸಿದರು. ವಿಶೇಷವಾಗಿ ಸಂಭಾಜಿ ತಡಸದ ಅವರು ಶಿವಾಜಿ ಮಹಾರಾಜರ ವೇಷಭೂಷಣ ತೊಟ್ಟು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ನಂತರ ಮಾರಾಠಾ ಸಮಾಜದಲ್ಲಿ ಎಸ್ ಎಸ್ ಎಲ್ ಸಿ, ಹಾಗೂ ಪಿ ಯು ಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಉತಿರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಜಗದೀಶ ಕಮ್ಮಾರ, ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಸತೀಶ ಕೊಬ್ಬಯ್ಯನವರ, ಮುಖಂಡರಾದ ನಾಗರಾಜ ದೇಶಪಾಂಡೆ, ವಿಠ್ಠಲ ಚವ್ಹಾಣ, ಅಶೋಕ ಘೋರ್ಪಡೆ, ಕಲ್ಲಪ್ಪ ಹರಕುಣಿ, ವಿನೋದ ಮಾಣಿಕ್ಕನವರ, ಶಂಕರ ಪರಮೇಕರ, ಗಣೇಶ ಕೊಕಾಟೆ, ಜ್ಯೋತಿಬಾ ಶಿಂಧೆ, ವನಮಾಲ ಪವಾರ, ಸರಸ್ವತಿ ಪವಾರ ಹಾಗೂ ತುಳಸವ್ವ ನಿಂಬೋಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ಗೌಳಿ ಕಾರ್ಯಕ್ರಮ ನಿರೂಪಿಸಿದರು.

