2047ರ ವೇಳೆಗೆ ವಿಕಸಿತ ಭಾರತ ಖಚಿತ”: ಕರ್ನೂಲ್‌ನಲ್ಲಿ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಸಮ್ಮುಖದಲ್ಲಿ ₹13,000 ಕೋಟಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಕರ್ನೂಲ್ (ಆಂಧ್ರಪ್ರದೇಶ): 21ನೇ ಶತಮಾನವು ಭಾರತದ 140 ಕೋಟಿ ಜನರಿಗೆ ಸೇರಿದ್ದು. 2047ರ ವೇಳೆಗೆ ಭಾರತವು ಖಂಡಿತವಾಗಿಯೂ ‘ವಿಕಸಿತ ಭಾರತ’ವಾಗಿ (ಅಭಿವೃದ್ಧಿ ಹೊಂದಿದ ಭಾರತ) ಹೊರಹೊಮ್ಮಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುರುವಾರ ಆಂಧ್ರಪ್ರದೇಶದ ಕರ್ನೂಲ್‌ಗೆ ಭೇಟಿ ನೀಡಿದ್ದ ಅವರು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ₹ 13,000 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಚಾಲನೆ:ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ₹ 13,000 ಕೋಟಿಗೂ…

